ತತ್ವ ವಿಚಾರ ಪ್ರಕರಣ - ಭಾನಾಭಾಸ್ಯ ವಿಧಾನವರಿತ ಸಮ್ಯ ಜ್ಞಾನಿಯೇ ಪರಶಿವನೂ

ತತ್ವ ವಿಚಾರ ಪ್ರಕರಣ


kannadabhajanlyrics.blogspot.com
kannadabhajanlyrics.blogspot.com
, belaguru swamiji photo


ಭಾನಾಭಾಸ್ಯ ವಿಧಾನವರಿತ ಸಮ್ಯ |

ಜ್ಞಾನಿಯೇ ಪರಶಿವನೂ। 

ಸ್ನಾನಪಾನಾ। ದ್ಯಾನ ಯಜ್ಞದಿ। ಧಾನ ನುತಿಸಂ।

ಧಾನ ಜಪ ತಪ। ಮೌನ ಯಮಗಳೇನು ತೋರದ। 

ನೂನ ಸುಖರಸ। ಪಾನದೊಳಗಿಹ ॥ಪ॥ 


ಒಂದರೊಳಗೈದಾಯಿತೆಂಬುವದು |

ಶೃತ್ಯುಕ್ತಿ ಗುರುಮುಖದಿಂದ ನಿಶ್ಚಲ ಮಾಗಿ

ತೋರಲದೂ ನಿಂದ್ಯಾತನೂಭವಾನಂದದಲಿ।

ತದ್ಭಿನ್ನವನು ತಿಳಿದೂ। ಪರಿಪೂರ್ಣ ಭಾವದಿ |

ನಿಂದುವಾಸನೆ | ಬೆ೦ದು ಮಾಯೆಯ |

ಕೊಂದು ಭೇದವ ತಿಂದು ಕರ್ಮಿಯು।

ಹೊಂದಲಾಗದ। ಮಂದ ಬ್ರಹ್ಮಾನಂದ 

ಕಡಲೊಳು ಮುಂದು ಸುಖಿಸುವ॥ ೧ 


ಕೋಶ ತದ್ಭರ್ಮಂಗಳನು ತಿಳಿದೂ|ನಿಜ ಭೋದೆಯಿಂದಾ|

ಕೋಶ ಗಳನೊಂದೊಂದನೇಕಳದೂ।

ತನ್ನೇರಿಯಿಂ ಪರಿ|ಶೇಷಗೊಳಿಸಿದ ವಸ್ತುವನು ಓಡಿದೂ|

ತನ್ನಿರ್ಮಲತ್ವದಿ | ಕ್ಲೇಶ ಪಂಚಕ ದೋಷಗಳ ನ।

ಧ್ಯಾಸ ಮಾಡದ | ಶೇಶ ಮಾಯಾ ಪಾಷದಿಂ ಜಗ।

ದೀಶನಾಗಿ ಸಂತೋಷ ದೊಳಗಿಹ॥ ೨ ||


ಕೂರ ಕರ್ಮ ವಿಧಾನಗಳು ಪೋಗಿ |

ಗುರುಶಂಕರಾರ್ಯನ ಸೇರಿ ಬೇದಾ ಭೇದಗಳ ನೀಗಿ |

ನಾನಾ ವಿಚಿತ್ರದಿ। ತೋರುವೀ ಜಗವೆಲ್ಲ ದೃಕ್ಕಾಗಿ|

 ಪ್ರಾರಬ್ಧದೊಡನೆಯು | ಹೋರಿ ನಿಜ ಜಯ |

ಭೇರಿ ನಾದವ ಬೀರಿ ಶಂಕೆಯ | ಮೀರಿ ವಿಧಿಯನು।

ಹಾರಿ ಕರ್ಮವ ತೂರಿ ತತ್ವದಿ | ಸೇರಿ ನಿಜ ಸುಖ

ತೋರಿ ಬೆಳಗುವ ||ಭಾನಾ|| ೩.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು