|| ಗುರು ಮಹಿಮಾ ಸ್ತುತಿ ||
ಭಜಿಸು ಬಿಡದೆ ಗುರುನಾಥನ |
ನೀ ತ್ಯಜಿಸಲೋ ಎರಡೆಂಬ ಮಾತನಾ॥ಪಲ್ಲವಿ||
ಹಿಂದು ಮುಂದು ಕಾಣದೆಮ್ಮ|
ಬಂಧನವ ಬಿಡಿಸಿ ನಿತ್ಯಾ |
ನಂದವ ತೋರಿದ ನಿಜದಾತನಾ।।ನೀ ಭಜಿಸು॥
ನಿಜವನರಿಯದಿರಲು ಪುಟ್ಟಿ ।
ಅಜನ ಸೃಷ್ಟಿಯಿಂದ ಬಂದ |
ರುಜೆಯ ಕೆಡಿಸಿದ ಪರಮಾತ್ಮನಾ।।ನೀ ಭಜಿಸು।।
ಅಲ್ಲಿ ಇಲ್ಲಿ ಎಂಬ ಸೊಲ್ಲ|
ಸುಳ್ಳು ಮಾಡಿ ಪುಣ್ಯ ಪಾಪ |
ವಿಲ್ಲದಂತೆ ಗೈದ ಮಾಯಾತೀತನಾ।।ನೀ ಭಜಿಸು||
ತೋರಿಕೆಡುವೋ ದೃಶ್ಯವನ್ನು |
ಮೀರಲಿಚ್ಛೆಯುಳ್ಳ ಅಧಿ |
ಕಾರಿ ಪುಣ್ಯ ಪುರುಷ ಪಾರಿಜಾತನಾ।।ನೀ ಭಜಿಸು।।
ಶಂಕೆಯನ್ನು ಹರಿಸಿ ಗುರು|
ಶಂಕರಾರ್ಯನಸೆನಿಸಿ ಜನ್ಮ |
ಸಂಕಟವ ಕೆಡಿಸಿದಮಳಾತ್ಮನಾ।।ನೀ ಭಜಿಸು||
0 ಕಾಮೆಂಟ್‌ಗಳು