ಗುರು ಸ್ತುತಿ - ಮಹಾರಾಜ್‌ ನಿನ್ನನು ಬೇಡುತಿಹೆ ನಾನು

|| ಗುರು ಸ್ತುತಿ ||

kannadabhajanlyrics.blogspot.com
kannadabhajanlyrics.blogspot.com




ಮಹಾರಾಜ್‌ ನಿನ್ನನು | ಬೇಡುತಿಹೆ ನಾನು |

ಮಹನೀಯ ಎನ್ನನು | ಕೈ ಬಿಡ ಬೇಡೆಂದು | 

ಕೃಪೆ ಮಾಡಬೇಕೆಂದು ॥ ೧.


ನಾಮದ ಮಣಿಯ ಬೆಳಕಿನಿಂದ|ದಾರಿಯನ್ನೇ ತೋರಿದೆ |

ನಾಮ ಸ್ಮರಣೆ ಮಾತ್ರದಿಂದ | ಭಕ್ಷರ್ನೆಲ್ಲಾ ಕಾಯ್ದೆ |

ಕಷ್ಟವೆಲ್ಲ ನೀಗಿದೆ || ೨.


ಜೀಜಾ ಬಾಯಿಯ ಕೈಯಿಂದ ನೀ|ಕೆಂಡವನ್ನೇ ನುಂಗಿದೆ |

ಮಾಝೆ ಸದ್ಗುರು ರಾವೋ ಎಂದು|ಪಾಡಿಸಿ ಕೊಂಡೆ |

ಪೊಗಳಿಸಿ ಕೊಂಡೆ ॥ ೩.


ಜೆಂತಾಮಣಿಯ ಮಂದಿರದಲ್ಲಿ|ಸದಾ ವಾಸಿಪೆನೆಂದೆ |

ಚಿಂತೆಯೆಲ್ಲವನ್ನು ಹರಿಸಿ | ನಾಮ ಸ್ಮರಣೆ ಮಾಡೆಂದೆ |

ರಾಮ ಸ್ಮರಣೆ ಮಾಡೆಂದೆ || ೪.


ಸ್ವಾಮಿ ಬ್ರಹ್ಮ ಚೈತನ್ಯ | ಪ್ರೇಮದಿಂದ ನೋಡೆನ್ನ|

ಸ್ವಾಮಿ ದಾಸ ಬೇಡುವೆ | ಭಕ್ತಿಯನ್ನು ನೀಡೆಂದು |

ಮುಕ್ತಿಯನ್ನು ನೀಡೆಂದು ॥ 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು