ಗುರು ಸ್ತುತಿ - ಬಹಳ ಪಾಪಿ ನಾನು ಶರಣು ಬಂದೆ ನಿನಗೆ

|| ಗುರು ಸ್ತುತಿ ||

kannadabhajanlyrics.blogspot.com
kannadabhajanlyrics.blogspot.com


ಬಹಳ ಪಾಪಿ ನಾನು | ಶರಣು ಬಂದೆ ನಿನಗೆ ।

ತಕ್ಕೊಳ್ಳೊ ಪೊದರೊಳೆಗೇ | ಗುರುದೇವಾ ॥ ೧ ||


ಸಾಧು ಸಂತರಿಂದ | ಮಹಿಮೆ ಕೇಳಿ ಕೇಳಿ |

ನಂಬಿದೆ ಮನದಲ್ಲಿ | ನಿನ್ನ ಪಾದ || ೨ ||


ನಿನ್ನ ಕೃಪೆಯಿಂದ | ಎಷ್ಟೊ ಪಾಪಿ ಜನರು |

ಆನಂದ ಹೊಂದಿದರು | ಭಕ್ತರಾಗಿ ॥ ೩ ||


ಹಾಗೆ ಆಗಬೇಕು | ಮಹಾ ಭಾಗವತ |

ನಿನಗೆ ಶರಣಾಗತ | ಈ ಅನಾಥಾ ॥ ೪ ||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು