ಶ್ರೀ ಬಿಂದುಮಾಧವ ಶರ್ಮ ವಿರಚಿತ - ಶ್ರೀ ಎಂ ಸ್ವಾಮೀಜಿ ಸ್ತುತಿ

|| ಶ್ರೀ ಎಂ ಸ್ವಾಮೀಜಿ ಸ್ತುತಿ ||

ಶ್ರೀ ಬಿಂದುಮಾಧವ ಶರ್ಮ ವಿರಚಿತ 

28 ಏಪ್ರಿಲ್ 2019

ಬೆಲಗೂರು 

kannadabhajanlyrics.blogspot.com
kannadabhajanlyrics.blogspot.com



ರತ್ನ ಬಂದಿದೆ ನೋಡಿರೋ - ಶ್ರೀ ಎಮ್‌

ಎಂಬ ರತ್ನ ಬಂದಿದೆ ನೋಡಿರೋ ॥ 


ವೇದ ಶಾಸ್ತ್ರ ಪುರಾಣವರುಹುತ

ದೇಶವೆಲ್ಲವ ಸುತ್ತಿ ತಾನು 

ತನ್ನ ತಾನು ತಿಳಿಯಿರೆಂದು 

ಮತ್ತೆ ಮತ್ತೆ ಅರುಹಿದಂಥ || ರತ್ನ ||


ದೇಶ ದೇಶಗಳೆಲ್ಲ ಸುತ್ತಿ

ಭಾರತಾಂಬೆಯ ಬಿಡದೆ ಸ್ತುತಿಸಿ

ವೀರತತ್ವವ ಪೊಗಳುತಲಿ ತಾ

ಧೀರನಾಗಿ ನಿಂತ ನಿಜ ಶ್ರೀ ॥ ರತ್ನ ||


ಕಾಲುನಡಿಗೆಲಿ-ನಡೆಯುತಾ-

ಇವ ತನ್ನ ಭಕ್ತರ ಮುದದಿ ಪೊರೆಯುತ

ನಿತ್ಯರಾಮ ಧ್ಯಾನ ಮಾಡುತ 

ಸತ್ಯ ಧರ್ಮವ ಬಿಡದ - ಶ್ರೀ ॥ ರತ್ನ ||


ಜಾತಿ ಭೇದವ ಎಣಿಸದೆ ತಾ

ದೇಶಸೇವೆಯ ನಿತ್ಯ ಮಾಡಿ 

ವೇದ ಧರ್ಮವ ಸಾರಿ ತಿಳಿಸುತ 

ಧ್ಯಾನ ಮಾರ್ಗವ ಬಿಡದೆ ಹಿಡಿದ ॥ ರತ್ನ ||


ಮಂದ ಮತಿಯರ ತಿದ್ದಿ ತಾನು

ಎಂದಿನಂತೆ ನಿಂತನಿವನು 

ಸಂತತಂ ಸತ್ಕರ್ಮ ನಿಷ್ಠನು

ಜ್ಞಾನಮಾರ್ಗವ ತೋರಿದಂಥ ॥ ರತ್ನ ||


ಭಾರತಾಂಬೆಯ ಉದ್ದ ಅಗಲಕು

ಹೆಜ್ಜೆ ಮೇಲೆ ಹೆಜ್ಜೆ ಹಾಕುತ

ಜನರಿಗಾನಂದ ತೋರುತ 

ತನ್ನ ತಾನು ಎಂದೋ ಮರೆತ ॥ ರತ್ನ ||


ಅತ್ತ ಇತ್ತ ಸುತ್ತಿ ಈತನು

ನ್ಯಾಯ ಪತಿಯ ಜೊತೆಯಲಂದು

ಬೆಲಗೂರು ಹನುಮ ವಿಲಾಸವರಿತು

ಹನುಮ ವಿಳಾಸಕೆ ಬರುತಲಿರುವ || ರತ್ನ ||


ಅಂದು ಹನುಮನ ಕಂಡ ತಾನು

ತನ್ನ ಅಗ್ರಜನೀತನೆನುತ 

ತೆರೆದ ಹೃದಯದಿ ಬಾಚಿ ತಬ್ಬುತ

ಜನ್ಮ ಸಾರ್ಥಕವಾಯಿತೆಂದ ॥ ರತ್ನ ||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು