|| ಶಾರದಾ ಸ್ತುತಿ ||
ರಾಗಃ ದೇಶ್
ತಾಳಃ ತ್ರಿಪುಟ
ದೇವಿ ಶಾರದೆ ನಿನ್ನ ಚರಣಕೆ |
ಶಿರವ ಬಾಗುತ ನಮಿಪೆವು |
ಕಾವುದೆಮ್ಮನು ಕರುಣೆಯಿಂದಲಿ |
ವರದ ವೀಣಾ ಪಾಣಿಯೇ |
ಹರನು ಇಂದ್ರನು | ಹರಿ ವಿರಂಚಿಯು |
ಸುರರು ನಿನ್ನನು ಸ್ತುತಿಪರು |
ಹರಿಸುತೆಲ್ಲರ | ಮನದ ಶಂಕೆಯ |
ಹರಸು ಹರುಷದಿ ವಾಣಿಯೆ || ೧ ||
ಓದುವಾಗಲು | ಬರೆಯುವಾಗಲು |
ನುಡಿಯುವಾಗಲು ನಿನ್ನನು |
ಮುದದಿ ನೆನೆಯುವ | ನಮ್ಮ ಮನದಲಿ ।
ಬಿಡದೆ ನೆಲಸಿರು ಮಾತೆಯೇ || ೨ ||
ವಿಜಯ ವಿದ್ಯಾರಣ್ಯ ಕಟ್ಟಿದ !
ಚಾಮುಂಡಾಂಬೆಯ ನಾಡಿನ ।
ಮನೆಯ ಮಕ್ಕಳ | ಸೌಖ್ಯ ಗಾನವ |
ಲಾಲಿಸೌ ಪರಿಪಾಲಿಸೌ || ೩ ||
0 ಕಾಮೆಂಟ್‌ಗಳು