ಗುರು ಸ್ತುತಿ - ಶ್ರೀಗುರು ವಚನ ಸುಧಾರಸವನು ಸವಿ, Sri Guru Vachana Sudharasavanu

 || ಓಂ ಜಯ ಗುರು ಶಂಕರ ಭಗವನ್‌ ||

kannadabhajanlyrics.blogspot.com
kannadabhajanlyrics.blogspot.com


ಶ್ರೀಗುರು ವಚನ ಸುಧಾರಸವನು ಸವಿ | 

ದಾಗಾಳಾಹುದು ನರರಿಗೆ ಮಕುತಿ।

ಭೋಗಾ ಭೋಗಾಭಿಯೋಗವ ನೀಗಿ ಶಿವ |

ಜೀವ ಯೋಗಾನು ರಾಗ ತತ್ಪರಚಿತ್ತನಾಗೀ ॥ಪಲ್ಲವಿ॥ 


ತೊರೆದು ವಿಷಯವನಿ | ರ್ವಿಷಯಾಂಕುರವಸು।

ಸ್ಥಿರಮತಿ ಎಂಬ ಸುಕ್ಷೇತ್ರಾದೊಳು।

ಕರಿಗೊಂಡು ನೆಲಸಿ ಸಜ್ಜನ ಸಂಘವೆಂಬ ಪು |

ಷ್ಕರವೆರದಭಿವೃದ್ಧಿಗೊಳಿಸೆಂದು ಪೇಳುವ || ೧ ||


ನಿರಹಂತೆ ಎಂಬ ಪಾತಿಯ ಕಟ್ಟಿ ಮರವೆಯಂ |

ಬುರುಕಂಟಕವನೆಲ್ಲ | ನೆರೆಶೋಧಿಸಿ |

ಅರಿವರ್ಗವೆಂಬ ಭಾದಕ ಕೀಟಕವ ಕೊಂದು |

ಗುರುಭಕ್ತಿಯಂಬಭಿವೃತ್ತಿಗಟ್ಟಿ ಪೊರೆ ಎಂಬ || ೨ ||


ಭೇದಾವಾದಗಳೆಂಬ ಚೋರಾರ ನಿಜ ತತ್ವ |

ಬೋದೆಯೆಂಬುರು ಖಡ್ಗದೊಳು ತರಿದೂ॥

ಸಾಧಿಸಿ ಮುಕ್ತಿ ಎಂಬುವ ಫಲವನು ಸವಿದಾನಾದಿ

ಶ್ರೀಗುರುಶಂಕರನ ಕೂಡೆಂದುಸುರುವ ಶ್ರೀಗುರು ||೩||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು