ತತ್ವ ವಿಚಾರ ಪ್ರಕರಣ - ಚಿನ್ಮಯ ಸುಖಸಾಗರಾ ನೀನಾಗಿ, Chinmaya Sukha Sagara Neenagi

|| ತತ್ವ ವಿಚಾರ ಪ್ರಕರಣ ||

kannadabhajanlyrics.blogspot.com
kannadabhajanlyrics.blogspot.com



ಚಿನ್ಮಯ ಸುಖಸಾಗರಾ ನೀನಾಗಿ |

ನಿನ್ನೊಳಗಿಹ ಮಾಯೆಗೆ ವಶನಾಗಿ ||೧||


 ಅನ್ಯೋನ್ಯಾ ಧ್ಯಾಸಕೆ ಗುರಿಯಾಗಿ |

ನಿನ್ನ ನಿಜತ್ವಕೆ ನೀ ಹೊರಗಾಗೀ |

ಅನ್ಯಾಯದ ಕರ್ತ್ಯತ್ವಕೆ ಪೋಗಿ।

ನಿನ್ನಾನಂದದ ಘನತೆಯ ನೀಗಿ ||೨||


ಮುನ್ನಿಲ್ಲದ ಬಂಧನ ಬರಲಾಗಿ।

ಜನ್ಮದ ಕರ್ಮಿಯ ನಡೆ ಹಿತಮಾಗೀ |

ಸನ್ಮಾರ್ಗವಿದೆನ್ನುತ ಬೆರಗಾಗಿ!

ವರ್ಣಾಶ್ರಮ ಧರ್ಮಗಳೊಂದಾಗೀ।|೩||


ನಿನ್ನೊಳು ಸೇರಲು ವಿಧ ವಿಧವಾಗಿ |

ಪುಣ್ಯ ಕರ್ಮದೊಳು ಮತಿಯುಂಟಾಗಿ |

ಧನ್ಯನು ನಾನೆನ್ನುತ ಬೆರಗಾಗಿ |

ಕಣ್ಣಿಲ್ಲದ ಕುರುಡನಿಗೆಣೆಯಾಗಿ ||೪||


ಮಣ್ಣಿನ ಬೊಂಬೆಗಳಿಗೆ ಶಿರಬಾಗಿ!

ಇನ್ನೀ ಭಾರವ ಪೊತ್ತವನಾಗಿ

ರನ್ನ ಮಯದ ಸ್ಪರ್ಗಕ್ಕೆ ನೀ ಪೋಗಿ।

ಉನ್ನತನೆನಿಸುತ ಸುರರೊಳಗಾಗಿ ।|೫||


ಕನ್ಯಯರೊಲುವೆಗೆ ಪರವಶನಾಗಿ |

ಮನ್ನಣೆಯಿಂ ಭೋಗಿಸುತಿರಲಾಗಿ |

ಪುಣ್ಯದ ಫಲ ತೀರುತ ಬರಲಾಗಿ |

ಇನ್ನದಕಿಂದ್ರನು ನಿರ್ದಯನಾಗಿ ।|೬||


ನಿನ್ನಾ ದೇಹವ ಛೇದಿಸಲಾಗಿ।

ಕಣ್ಣೀರಲಿ ಕೈ ತೊಳೆಯುವುದಾಗಿ |

ಜನ್ಮಗಳೆತ್ತಿದೆ ಬಗೆ ಬಗೆಯಾಗಿ |

ಜನ್ಮಾಂತರ ಕರ್ಮಕೆ ವಶನಾಗಿ ||೭||


ಚಿನ್ನಯ ಗುರುಶಂಕರ ಕೃಪೆ ಬೇಡಿ।

ಬಿಡು ಬಿಡು ದೇಹಾತ್ಮದ ಮತಿಯಾ।|೮||






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು