|| ಸುಬ್ರಹ್ಮಣ್ಯ ಸ್ತುತಿ ||
ಧ್ಯಾನ ವೈಭವ ದೀನ ರಕ್ಷಕ
ಜ್ಞಾನದಾಯಕ ಷಣ್ಮುಖಾ
ಪಾಮರಾರ್ಚಿತ ಪಾದಯುಗಳ
ಫಾಲತನಯ ಷಡಾನನಾ ||೧||
ದೀನ ಪಾಲ ಕುಮಾರಧಾರ
ತೀರ ಶೋಭಿತ ಷಣ್ಮುಕಾ
ಗಾನಲೋಲಾ ವಸಿಷ್ಠ ಭೃಗು
ಶುಕ ಪಾದವಂದ್ಯ ಷಡಾನನ ||೨||
ನಾಗನಾಥ ವಿಶಾಲನೇತ್ರ
ಮಹೇಶ ಪುತ್ರ ಷಣ್ಮುಖಾ
ಆಗಮಾನಕುತ ನಾರ್ತರಕ್ಷಕ
ರಾಗರಹಿತ ಷಡಾನನ ||೩||
ಧರಣಿಧರ ಶ್ರೀ ಸುರವರೇಣ್ಯ
ವರುಣ ಪೂಜಿತ ಷಣ್ಮುಖಾ
ಪರಮ ಪುರುಷ ಪಾವನಾತ್ಮ
ಕರುಣ ಪೂರ್ಣ ಷಡಾನನ ||೪||
ಅನಾದಿ ಮೂರುತಿ ಮನೋಜ್ಞ
ಕೀರ್ತಿ ದಿನಾವಿಭೂತಿಯ ಷಣ್ಮುಖ
ಉಮಾ ಮನೋಜ್ಯ ಸ್ವಾಮಿ ಪರೇಶ
ಕುಮಾರರೂಪಾ ಷಡಾನನಾ ||೫||
ವಾರಿಧೀಶ ಸುರೇಷ ವಾಸುಕಿ
ತಾರಕಾಂತಕ ಷಣ್ಮುಖಾ
ದಾರಿಣೀಶ ಪರೇಶ ಸದ್ಗುರು
ಗರುಡ ಗಮನ ಷಡಾನನ ||೬||
ಸಕಲ ದೇವ ಸಮೂಹ ಪರಿವೃತ
ವಿಶಾಲಹೃದಯ ಷಣ್ಮುಖಾ
ಅಖಿಲ ನಾಯಕ ವಿಕಸಿತೋದಯ
ಸಕಲ ಹೃದಯ ಷಡಾನನ ||೭||
ಆರಗಾಕುಲ ದೀಪ ಪ್ರಜ್ವಲ
ಶಾರದಾಕೃತ ಷಣ್ಮುಖಾ
ನಾಮಶಂಕರ ಶರ್ಮವಂದಿತ
ಭಾವರೂಪ ಷಡಾನನ ||೮||
ಮಂಗಳಂ ಶಿಖಿವಾಹ ಜಯ ಜಯ
ಮಂಗಳಂ ಶ್ರೀ ಷಣ್ಮುಖಾ
ಮಂಗಳಂ ಭವತಾರ ಜಯ
ಜಯ ಮಂಗಳಂ ಶ್ರೀ ಷಡಾನನಾ ||೯||
0 ಕಾಮೆಂಟ್‌ಗಳು