|| ಸುಬ್ರಹ್ಮಣ್ಯ ಸ್ತುತಿ ||
ಕುಕ್ಕೇ ಪುರದೊಳಗಿರುವನ ನೋಡು
ಅಕ್ಕರದೀ ಸ್ವಾಮಿ ಭಜಿಸಿಕೊಂಡಾಡು ||೧||
ಶೇಷ ವಾಸುಕಿ, ಷಣ್ಮುಖನ್ ನೋಡು
ತೋಷದಿ ಪೂಜೀಸಿ ಕೊಳುವನ, ನೋಡು || ೨॥
ಹುತದಿ ತಲೆ ಎತ್ತಿರುವನ ನೋಡು
ನಿತ್ಯುಪಚಾರದ ಕಟ್ಟಲೆ ನೋಡು ||೩||
ಸರ್ಪರೂಪದಿ ನೆಲಸಿಹ ನೋಡು
ದರ್ಪ ವೇಷದೊಳಿವನ ನೋಡು ||೪||
ಧಾರಣಿ ಮಾಣಿಕ್ಯ ದೊರೆಯನು ನೋಡು
ಶರಣರ ಪಾಕಲ ರಾಜನ ನೋಡು ||೫ ||
ಒದ್ದೆ ವಸ್ತ್ರಾದರ್ಚಕರನು ನೋಡು
ಶುದ್ಧ ಮಡಿಯಾಚಾರವ ನೋಡು ||೬ ||
ಮಾತನಾಡದ ಪೂಜಾರಕರ್ ನೋಡು
ಜೋಕೆಯ ದೆಚ್ಚರ ನೇಮವ ನೋಡು ||೭||
ಪುಟ್ಟ ಮಾಕರುತಿ ಮುಖ ಕಣ್ಣನು ನೋಡು
ಇಟ್ಟ ತೋಡಿಗಾ ಭರಣವ ನೋಡು ||೮||
ಬಟ್ಟು ತಿಲುಕ ಕಸ್ತೂರಿ ನೋಡು
ದೃಷ್ಟಿ ಗೋಚರ ಸ್ವಾಮಿ ನೋಡು ||೯ ||
ಜುಟ್ಟಿ ಕಾಳಿಂಗ ವೇಷವ ನೋಡು
ಮುಟ್ಟಲಿ ಕಾಗದ ದೇವನ ನೋಡು || ೧೦ ||
ಎತ್ತಿ ಕೈ ಮುಗಿದವನಲಿ ಬೇಡು
ಭಕ್ತಿಯೊಳ್ ತಲೆಯ ಬಗ್ಗಿಸಿ ಹಾಡು ||೧೧||
ಶಾರದ ಕೃತ ನಿಜ ರಾಗವ ಹಾಡು
ಆರಗ ಕುಲ ಗುರು ಸ್ವಾಮಿ ನೋಡು ||೧೨||
ಬೆಟ್ಟದಿ ಬಂದಿಹ ಸ್ವಾಮಿಯ ನೋಡು
ಕುಕ್ಕೆ ಪುರದೊಳ ಗಿರುವನ ನೋಡು ||೧೩||
ನಿತ್ಯ ಪೂಜಿಸಿ ಮಂಗಳ ಹಾಡು
ಸತ್ಯ ಮಾರುತಿ ಭಜನೆಯ ಮಾಡು ||೧೪||
0 ಕಾಮೆಂಟ್‌ಗಳು