|| ಸುಬ್ರಹ್ಮಣ್ಯ ಸ್ತುತಿ ||
ತಾರಕ ದೈತ್ಯನು ಲೋಕವ ಬಾಧಿಸೆ
ಶೂಲಕಗುದಿಸಿದ ಶ್ರೀ ಸ್ಕಂದ
ಮೋದಕ ಪ್ರಿಯನು ಬಾಲಕನಾಗೀ
ಪಾಲಕ ನೆನಸಿದ ಹೇರಂಭಾ ॥೧॥
ದಾತರು ಇಲ್ಲದ ಭೂತಳ ಪಾಲಿಸೆ
ಆತುರನಾದನು ಶ್ರೀ ಸ್ಕಂದ
ನೂತನ ರೂಪದಿ ಭೂಸುರಗೊಲಿದನು
ಶೇಷ ಸಹೋದರ ಹೇರಂಬಾ ||೨॥
ಸಾಗರ ಕಡೆಯಲು ಹಾವಾಗಿ ಬಂದನು
ಯೋಗ ಸ್ವರೂಪನು ಶ್ರೀ ಸ್ಕಂದ
ಕಾದಿಹ ಸುರರಿಗೆ ತಾನಭಯನಿತ್ರನು
ವೇದ ಸ್ವರೂಪ ಹೇರಂಭ ॥೩॥
ದಾನ ವರ್ದಾವಳಿ ಭೂಮಿಯೊಳ್ಹರಿಸಲು
ನಾಗರ ವಾದನು ಶ್ರೀ ಸ್ಕಂದ
ರಾವಣ ಲಿಂಗವ ತರುವದು ಕೇಳಿ
ಧಾರಣಿಗ್ಬಂದನು ಹೇರಂಭಾ ॥೪॥
ಅಸುರರ ಶಿರಗಳ ಎಸೆಯಲು ಬಂದನು
ವಸುಧೆಗೆ ನಲಿದೂ ಶ್ರೀ ಸ್ಕಂದ
ದಶಮುಖ ನೆದುರಲಿ ದಿಟವನೆ ಮರಸೀ
ಬಸುದಿಯೋಳ್ನಿಂದನು ಹೇರಂಬಾ ॥೫॥
ಖುಷಿಗಳ ರಕ್ಷಿಸೆ ಪೇಕ್ಷಿಸಿ ಬಂದನು
ಶಿಶು ರೂಪದಲೀ ಶ್ರೀ ಸ್ಕಂದ
ಅಸಮ ಸಹಾಸಿಯ ಶಶಿಯನು ಮನ್ನಿಸಿ
ದಿಸೆಯನು ಬೆಳಗಿದ ಹೇರಂಬಾ || ೬॥
ವಟು ರೂಪದೊಳೂ ನಟನೆಯ ತೋರಿದ
ಜಟಿಲಾಕಾರನು ಶ್ರೀ ಸ್ಕಂದ
ಕುಟಿಲತೆ ಇಲ್ಲದೆ ನಸುನಗೆಯಲಿನೆಂದ
ನಿಟಿಲ ನೇತ್ರ ಗುರು ಹೇರಂಬಾ ॥೭॥
ವನದೊಳು ತಿರುಗಿ ದನುಜರ ಮಡುಹಿದ
ಕಾನನದೊಳಗಾಡಿ ಶ್ರೀ ಸ್ಕಂದ
ಸನಕಾದಿಗಳೀಗನುಗ್ರಹ ಮಾಡಿದ
ಘನ ಮಹಿಮನು ತಾ ಹೇರಂಬಾ ॥೮॥
ತಾತನ ಮಾತನು ಪಾಲಿಸಲೋಸುಗ
ಭೂ ತಳ ತಿರುಗಿದ ಶ್ರೀ ಸ್ಕಂದ
ಮಾತೆಯ ವಾಕ್ಯಾ ನೀತಿಯರಿತೂ
ಪ್ರೀತಿಯೋಳ್ ಹರಿಸಿದ ಹೇರಂಬಾ ॥೯॥
ಶಕ್ರನ ಪುತ್ರಿಯ ಹಸ್ತವ ಪಿಡಿದನು
ಉತ್ತಮ ರೂಪನು ಶ್ರೀ ಸ್ಕಂದ
ಅಕ್ಕರೆಯಲಿ ಸಿದ್ದಿ ಬುದ್ಧಿಯರ್ ವರಿಸಿದ ್
ನಿತ್ಯ ವ್ರತಸ್ಥನು ಹೇರಂಬಾ ॥೧೦॥
ನವಿಲನ್ನೇರಿ ನಲಿವಿಂ ಕುಳಿತನು
ನಳಿನಾಕಾರಾ ಶ್ರೀ ಸ್ಕಂದ
ಮೂಷಕ ವೇರಿ ತೋಷದಿ ಕುಳಿತನು
ಭೂಸುರ ನಮಿತಾ ಹೇರಂಭ ॥೧೧॥
ಧರೆಯಲಿ ನರಸಿಂಹಪುರದಲಿ ನೆಲಸಿದ
ನಳಿನಾಕಾರ ಶ್ರೀ ಸ್ಕಂದ
ವರಶ್ರೀಂಗೇರಿಯ ಪುರದಲಿ ನೆಲಸಿದ
ವರ ವಿನಾಯಕ ಹೇರಂಬಾ ॥೧೨॥
ಸ್ಕಂದನ ನಾಮವನಂಬಿ ಪಠಿಸಲು
ಬಂಧನ ಹರಿಸುವ ಶ್ರೀ ಸ್ಕಂದ
ಲಂಬನ ನಾಮವ ನಂದದಿ ನುತಿಸಲು
ಕುಂದದೆ ಸಲಹುವ ಹೇರಂಬಾ ॥೧೩।
ಶರವಣ ನಮಿಸುತ ಶಂಕರ ಗುರುವನು
ಸ್ಮರಿಸುತ ಶಾರದ ಶ್ರೀ ಸ್ಕಂದ
ಗಣಪತಿ ಮಹಿಮೆಯ ಕವನದೊಳ್ಳಡೀ ॥೧೪॥
ಜಯ ಜಯ ಮಂಗಳ ಶ್ರೀ ಸ್ಕಂದ
ಜಯ ಶುಭ ಮಂಗಳ ಹೇರಂಬಾ
ತರೀಕೆರೆ ವಾಸ ಶ್ರೀ ಸ್ಕಂದ
ಮಂಗಳ ಜಯ ಶುಭ ಹೇರಂಬಾ
0 ಕಾಮೆಂಟ್‌ಗಳು