ದತ್ತ ಭಜನೆ - ಎಲ್ಲಾ ರೋಗಕು ಒಳ್ಳೆಯ ಔಷಧಿ ದತ್ತನ ಅಂಗಾರ, Ella Roagaku Olleya Oushadhi

|| ದತ್ತ ಭಜನೆ ||


ರಾಗ : ನಾದನಾಮ ಕ್ರಿಯೆ
ತಾಳ : ಏಕ 

kannadabhajanlyrics.blogspot.com
kannadabhajanlyrics.blogspot.com



ಎಲ್ಲಾ ರೋಗಕು ಒಳ್ಳೆಯ ಔಷಧಿ |ದತ್ತನ ಅಂಗಾರ | 

ಶೀ ಗುರು ದತ್ತನ ಅಂಗಾರ | 

ಬಲ್ಲಿದ ಜನರೇ ಕೊಳ್ಳಿರಿ ನೀವು | ಬಲ್ಲಿತ ಬಂಗಾರ...|

ಇದು ಒಳ್ಳೆ ಚೆಲ್ವೆಗೆ ಶೃಂಗಾರ | 

ಭಕ್ತಿಲಿ ಬಲ್‌ ಮಳೆ ಮುಂಗಾರ ||ಅ. ಪ.||


ಭೂತ ಪ್ರೇತಗಳು ಸೋತಾಡುವುವೈ | 

ಭೀತಿಲಿ ಬಲು ದೂರ | ಸದ್ಗುರು ಭೀತಿಲಿ ಬಲು ದೂರಾ

ಪಾತಕೆ ನಾಶಕ ನೀ ತರಧೌಷಧಿ | 

ದೊರಕದದೊಂದು ಚೂರಾ | 

ಸುಲಭದಿ ದೊರಕದೊಂದು ಚೂರಾ ॥೧||


ಕೋಟ್ಯಾಂತರ ಭವರೋಗದ ಭಾದೆಗಳ್‌ | 

ನಾಟುವುದಿದು ದೂರಾ|ಕಿಪ್ರದಿ ನಾಟುವುದಿದು ದೂರಾ|

ಮಾಟ ಮಂತ್ರಗಳು ನೆಡೆಯುವುದಾಗಿನ | 

ನಾಡಿನ ನುಡಿ ಸುತರಾ|ಭಜನೆಯ ಮಾಡಿರಿ ನೀ ವಿದರಾ..|

ಸದ್ಗುರು ಭಜನೆಯ ಮಾಡಿರಿ ನೀ ವಿದರಾ..||೨||


ಭಕ್ತಿಯ ರಸದಲಿ ಚಿತ್ರವ ಕಲೆಸುತ | 

ಒತ್ತಿರಿ ಪ್ರತಿವಾರ | ಈ ದೇಹಕಿ ಒತ್ತಿರಿ ಪ್ರತಿವಾರ | 

ಸತ್ಯವ ನುಡಿಯಿರಿ | ತತ್ವಕೆ ಇದು ಒಳ್ಳೆ ಸತ್ವದ ವಿಸ್ತಾರ | 

ಈ ದೇಹಕೆ ಸತ್ವದ ವಿಸ್ತಾರ ॥೩||


ಜ್ಞಾನದ ಗಂಗೆಯ ಸ್ನಾನವ ಮಾಡಿ | 

ಧ್ಯಾನದ ಬಿಸಿ ನೀರಾ|ಸದ್ಗುರು ಧ್ಯಾನದ ಬಿಸಿ ನೀರಾ । 

ಪಾನಕೆ ಯೋಗ್ಯವು ಗುರು ಕರುಣಾಮೃತ|ಮಾನದ ಸಂಚಾರ |

ವ್ಯಾಧಿಯು ಮಾನದ ಸಂಚಾರ ॥ ೪ ||


ಕಳ್ಳತನದ ಪರಹಿಂಸೆಯ ಬೇಳೆಗಳ್‌ |

ಎಳ್ಳಷ್ಟು ತಿನಬ್ಯಾಡ|ಇವುಗಳನ್‌ ಎಳ್ಳಷ್ಟು ತಿನಬ್ಯಾಡ|

ಸುಳ್ಳನು ಕಾಯುವ ಮೆಲ್ಲದಿ ರಂಗನ |

ಒಳಿತಲ್‌ ಔಕಾರ ಸದ್ಗುರುವಿನ ಒಳಿತಲ್‌ ಔಕಾರ||೫||






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು