|| ಗುರು ತತ್ವ ವಿಚಾರ ಪ್ರಕರಣ ||
kannadabhajanlyrics.blogspot.com |
ಗುರುದೇವಾ ನೀನೇ ದೀನರ ಬಂಧು |
ಸ್ಥಿರ ಕರುಣಾ ಸಿಂಧೋ ॥ ಪಲ್ಲವಿ ॥
ಕೊರತೆಯ ಪಡಿಸದೆ | ಶರೀರವ ಬಿಡಿಸಿದೆ |
ಶರಯೊಳು ನುಡಿಸಿದೆ | ಮರವೆಯ ಕೆಡಿಸಿದೆ |
ಹರುಷವ ಹರಿಸಿದೆ। ಹರನೊಳು ಬೆರಸಿದೆ |
ಧರಣಿಗೆ ಮರಳದ ಪರಿಯೊಳು ಪೊರೆದೇ || ೧ ||
ನಿನ್ನೊಳು ಸೇರಿದೆ|ಜನ್ಮವ ತೂರಿದೆಯೆನ್ನೆಣೆ ಬಾರದೇ।
ಉನ್ನತಿಗೇರಿದೆ | ಧನ್ಯತೆ ತೋರಿದೆ।
ಮಾನ್ಯರ ಮೀರಿದೆ | ಇನ್ನೊಂದರಿಯದೇ।
ನಿನ್ನೊಳು ಬೆರದೇ || ೨ ||
ಗುರು ಚರಣಕೆ ನಿಜ। ಶರೀರವ ಮಾರದೆ |
ಪರಮಾನಂದದ ಸಿರಿತನ ಬಾರದೆ |
ಕರಣದ ಧರ್ಮವನರಿತದಕೇರದೆ|ಗುರುಶಂಕರ ಪಾದ।
ದೊರೆವುದೇ ಬರಿದೇ ॥ಗುರುದೇವ॥
0 ಕಾಮೆಂಟ್‌ಗಳು