|| ಜಯ ಗುರು ಶಂಕರ ಭಗವನ್ ಮಂಗಳ ಸ್ತುತಿ ||
ಮಂಗಳಂ ಜಯ ಜಯ ಮಂಗಳಂ ।
ಶುಭ ಮಂಗಳಂ ಮುಕ್ತಿಗಾಧೀಶಾನಿಗೇ ॥ಪಲ್ಲವಿ||
ಒಡಲಿದೂ ನೀನಲ್ಲ | ಒಡಲೀಗಾಶ್ರಯನಲ್ಲ |
ವಡಲ ವಿಲಕ್ಷಣನೆಂದರುಪೀ। ಒಡಲಿನ ತೊಡಕನು।
ಬಿಡಿಸಿ ನಮ್ಮೆಲ್ಲರ! ಮೃಡನ ಮಾಡಿದ ನಿಜ। ದೇವನಿಗೆ
ದೇಹವ ದೇಹದ ಮೋಹವ ಮೋಹದ |
ಸಾಹಸಂಗಳನೆಲ್ಲ ನೆರೆ ಕಳೆದೂ।
ಊಹೆಗೆ ಸಿಲುಕದ ಸೋಹಂ ಕಳದಳುಮೆಯ ನೀ।
ಹ೦ಸನೊಳು ತೋರಿಸಿದ ಮೂರ್ತಿಗೇ || ೨ ||
ಜನನ ಮರಣಗಳ ತನುವಿನೊಳಡಗಿಸಿ।
ಮನಸಿಗೆ ರಾಗಾದಿಗಳ ನೊಪ್ಪಿಸಿ।
ಕನಸು ನನಸುಗಳೊಂದನು ಮಾಡಿ!
ಕೆಡಿಸದೆಮ್ಮನು ತುದಿ। ಗೊಳಿಸಿದ ನಿಜದೇವಗೇ ||೩||
ಓಂಕಾರವನು ಸತ್ವ | ಹಂಕಾರದೊಳಗಿಟ್ಟು |
ಹೂಂಕಾರವನು ಭಿನ್ನಪದದೊಳಿಟ್ಟು |
ಕಿ೦ಕರರೆಮ್ಮ ಶುಭಂಕರ ಶ್ರೀಗುರು |
ಶಂಕರನೊಳಗಿಟ್ಟ ಪರಮಾತ್ಮಗೇ ॥ಮಂಗಳಂ॥ ೪
0 ಕಾಮೆಂಟ್‌ಗಳು