॥ ಶ್ರೀ ರಾಮ ಸ್ತುತಿ ॥
ರಾಗ : ಶಂಕರಾನಂದಪ್ರಿಯ
ತಾಳ : ಆದಿ
ರಾಮಾ ಎಂಬೋ । ಎರಡಕ್ಷರದ । ಮಹಿಮೆಯನು । ಪಾಮರರು ತಾವು|ಏನ ಬಲ್ಲಿರಯ್ಯಾ॥ ರಾಮಾ॥ಪಲ್ಲವಿ
೧|| “ರಾ' ಎಂಬ ಮಾತ್ರದೊಳು । ರಕ್ತಮಾಂಸಗಳಿದ್ದು॥
ಆಯಸ್ಥಿತಿಗತವಾದ ಅತಿಪಾಪಗಳನು ॥
ಮಾಯವನು ಮಾಡಿ|ಮಹಾರಾಯ ಮುಕ್ತಿಯ ಕೊಡುವಾ॥
ದಾಯವನು ವಾಲ್ಮೀಕಿ|ಮುನಿತಾನೊಬ್ಬನೆಬಲ್ಲ||ರಾಮಾ॥
೨.॥ ಮತ್ತೆ “ಮಾ ಎನಲು ಹೊರಬಿದ್ದ ಪಾಪಗಳ । ಒತ್ತಿ
ಒಳಹೋಗದಂತೆ । ಕವಾಟವಾಗಿ ॥
ಚಿತ್ತಕಾಯಗಳನ್ನು । ಪವಿತ್ರಮಾಡುವ ಪರಿಯಾ ॥
ಭಕ್ತವರ ಹನುಮಂತ ।ತಾನೊಬ್ಬನೇ ಬಲ್ಲ ॥ ರಾಮಾ॥
೩.॥ ಧರೆಯೊಳೀ ನಾಮಕೆ । ಸರಿಮಿಗಿಲಿಲ್ಲ ಎಂದು ||
ಪರಮ ವೇದಗಳು । ಸಾರುತಿಹವೋ ॥
ಸಿರಿಯ ರಸ ಪುರಂದರ । ವಿಠಲನ ನಾಮವಾ ॥
ಶಿರಿಕಾಶಿಯೊಳಗಿರ್ಪ । ಶಿವಾ । ತಾನೊಬ್ಬನೇ ಬಲ್ಲ ॥
ರಾಮಾ ಎಂಬೋ ॥
0 ಕಾಮೆಂಟ್‌ಗಳು