ಜಾನಪದ ಶೈಲಿಯ ಶಿವ ಭಜನೆ -ಶಿವನು ಭಿಕ್ಷಕೆ ಬಂದ ನೀಡು ಬಾರೇ, Shivanu Bhikshake Banda

||ಜಾನಪದ ಶೈಲಿಯ ಶಿವ ಭಜನೆ||



ಶಿವನು ಭಿಕ್ಷಕೆ ಬಂದ ನೀಡು ಬಾರೇ

ತಂಗಿ  ಇವನಂಥ ಚೆಲ್ವರಿಲ್ಲ ನೋಡು ಬಾರೇ 

ಇವನಂಥ ಚೆಲ್ವರಿಲ್ಲ ನೋಡು ಬಾರೇ ॥ 


ಒಂದೇ ಕೈಲಾಜನಕ್ಕ ಕೋಲ ಕಾಣೆ

ಬೆನ್ಹಿಂದೆ ಕಟ್ಟಿರುವಂತ ಶೂಲಕಾಣೆ

ನಂದೀಯ ಕೋಲು ಹತಾಕೆಕಾಣೆ

ಮತ್ತೊಂದೊಂದು ಪಾದದಾ ಶೌರ್ಯ ಕಾಣೆ ॥ 


ಮೈಯೆಲ್ಲಾ ಹಾವಿನ ಮೊತ್ತಕಾಣೆ

ಕಲಗ ಕೈಯಲ್ಲಿ ಹಿಡಿದ ನಾಗರ ಬೆತ್ತ ಕಾಣೆ 

ವೈಯಾರ ಮೂರುಲೋಕ ಕರ್ತಕಾಣೆ 

ತಕ್ಕ ತೈಯಾ ತೈಯಾನಂದಕ್ಕಕಾಣೆ ॥ 


ಮನೆ ಮನೆಡಪ್ಪಲಿ ದಿಮ್ಮಿಕಾಲೆ ಡಾ

ಆತ ಹಣವನ್ನು ಕೊಟ್ರೂ ಒಲ್ಲನಂತೆ ಕಾಣೆ

ತನಿವಣ್ಣ ನೀಡಬೇಕಂತೆ ಕಾಣೆ 

ಗೌರಿ ಮನಸಾ ಬಿಟ್ಟಿರಲಾರನಂತೆ ಕಾಣೆ ॥ 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು