|| ಗುರು ಮಹಿಮಾ ಸ್ತುತಿ ||
ಶ್ರೀಮದದ್ವೈತ ಸದ್ಗುರು ಪರಂಪರೆಯನಾ।
ಪ್ರೇಮದಿಂ ಪೇಳ್ವೆಗುರು ಪುತ್ರ ಲಾಲಿಪುದು
ಆದಿಯೊಳ್ ಶ್ರೀ ಮಹದೇವನವನಿಂ।
ವಿಷ್ಣುವಾದ ತದನಂತರದಿ ಪದ್ಮ ಸಂಭವನೂ
ಶ್ರೀ ದಯಾಪರ ವಶಿಷ್ಠನು ತುರ್ಯನಾತ ನಿಂ।
ದಾದ ಶಕ್ತಿಯು ಎಂಬ ಯೋಗೀಂದ್ರವರನು ||೨||
ಘನ ಪರಾಶರನು ವ್ಯಾಸನು ಶುಕನು ಗೌಡಪಾದನು।
ವಿಮಲ ಗೋವಿಂದ ಯೋಗೀಂದ್ರವರನು
ಗಣಿಸೆ ತಚ್ಛಿಷ್ಠನೆಂದೆನಿಸಿ ಭೂಮಂಡಲದಿ|
ಜನಿಸಿದನು ಶ್ರೀಶಂಕರಾಚಾರ್ಯವರ್ಯ ||೩||
ಈತನೇ ಬ್ರಹ್ಮಸೂತ್ರೋಪನಿಷದಮಲ
ಸದ್ಗೀತಾದಿ ಭಾಷ್ಯಕ್ಕದ್ಗುರು ಚಕ್ರವರ್ತಿ।
ಪಾತಕಿಗಳೆಂದು ಬಳಲುವರನೆಲ್ಲರನು
ಪರಮಾತ್ಮರನು ಮಾಡಿದವನೀ ದಯಾಮೂರ್ತಿ||೪||
ಮೈರಾಳ ಕಾಳಯಾಮಳವಾಯವೀಯ್ಯ
ಕಾಪಾಲ ಭೇದ ಮೊದಲಾದ ಮುನ್ನೂರು ಮತಗಳನ್ನು|
ಬೇರುಸಹಿತ ಕತ್ತರಿಸಿ ಷಣ್ಮತಗಳನು ನಿಲ್ಲಿಸಿ
ಚಾರ್ವಾಕನೆಂಬ ನಾಸಿಕನ ಮುರಿದವನು ||೫||
ವಿತತ ಕರ್ಮಾರಣ್ಯ ಮಧ್ಯದೊಳು ಸಿಲುಕಿ |
ಬಳಲುತ ಹಿಂದು ಮುಂದುಗಾಣದೆ ದುಃಖಿಪರನು।
ಹಿತವನೆನಿಪ ನಿತ್ಯ ನಿರ್ಮಲ ಪರಾಖಂಡೈಕ।
ಪಥವ ತಾ ತೋರಿ ಲೋಕವನೆ ಪೊರೆದವನು||೬||
ಈಶ್ವರನೇ ಶ್ರೀಶಂಕರಾಚಾರ್ಯನ ರೂಪಿನಿಂ।
ವಿಶ್ಚದೊಳಗವತರಿಸಿ ಲೋಕವನು ಪೊರೆದು |
ವೈಶಾಖ ಶುದ್ಧ ದ್ವಾದಶಿಯ ದಿನದೊಳು ತಾ|
ಶಾಶ್ಚತಾಖಂಡರೂಪವನು ಹೊಂದಿದನು ||೭||
ಸಾಧು ಶ್ರೀ ವಿಶ್ವರೂಪಾಚಾರ್ಯ ತಚ್ಛಿಷ್ಯ
ಬೋಧ ಘನಯೋಗಿಯಂ ಜ್ಞಾನ ಗಿರಿವರ್ಯ।
ಆದನಾತಗೆ ಶಿಷ್ಯ | ಜ್ಞಾನಗಿರಿವರ್ಯ |
ತತ್ಪಾದ ಶಿಷ್ಯನು ಸಿಂಹಗಿರಿಯೋಗಿವರನು ||೮||
ತತ್ವದಿಂದಾತಗೀಶ್ಚರತೀರ್ಥ ನರಸಿಂಹ ತೀರ್ಥ!
ವಿದ್ಯಾಶಂಕರಾರ್ಯನಾ ಬಳಿಕಾ।
ಆತನಿಗೆ ಭಾರತೀ ಕೃಷ್ಣ ತೀರ್ಥಾಚಾರ್ಯ।
ತತ್ಪಾದಶಿಷ್ಯ ವಿದ್ಯಾರಣ್ಯ ಮುನಿಯು ||೯||
ಸಕಲ ನಿಗಮವ್ರಾತಗಳಿಗೆಲ್ಲ।
ಭಾಷ್ಯವನು ಪ್ರಕಟಿಸಿದನುಪನಿಷದ್ಭಾಷ್ಯಗಳ ನೂರ।
ಅಕಳಂಕ ಧರ್ಮಶಾಸ್ತ್ರಗಳ ವ್ಯಾಕರಣ।
ಮಾಂತ್ರಿಕ ಮುಖ್ಯಶಾಸ್ತ್ರಗಳ ಚಿಸಿದವನೀತ ||೧೦||
ಈತನೊಳಗಿರುವ ವಿದ್ಯೆಗೆ ಪಾರಗಾಣದಿರಲೀತ।
ವಿದ್ಯಾರಣ್ಯನೆನಿಸಿದನು ಜಗದೀ।
ಭೂತಳದೊಳೀ ಮಹಾಪುರುಷನವತರಿಸಿ।
ಪ್ರಖ್ಯಾತಮಾಯಿತು ವಿಮಲ ವೇದಾಂತ ತತ್ತ್ವ||೧೧||
ವರಲಕ್ಷ್ಮಿಯನು ಕುರಿತು ಘೋರ ತಪವನು ಮಾಡಿ!
ಹರುಷದಿಂ ವೃಷ್ಟಿಯನು ತಾ ಸುರಿಸೀ।
ವಿರಚಿಸಿದನಾಗ ವಿದ್ಯಾನಗರವೆಂಬ ಹೊಸ
ಪುರವನದ ಬುಕ್ಕನಿಗೆ ಪಟ್ಟವನು ಕಟ್ಟೆ || ೧೨ ||
ಮಕರ ತೋರಣ ತೀರ್ಯ ಗಾಂಧೋಳನಾದಿ।
ಬಹು ಸುಕರ ಭೂ ಮಂಡಲಾಚಾರ್ಯ ಗುರುವರ್ಯ|
ಪ್ರಕಟಿತ ವೇದಾಂತ ಸಿದ್ಧಾಂತ ಶುದ್ಧಾಂತ
ಮಕುಟನೆಂಬೀ ಬಿರುದ ಪಡೆದ ಘನ ಶೌರ್ಯ ||೧೩||
ಈತನಿಂ ಮುಂದಕಿಪ್ಪತ್ತೈದು ತಲೆಗಳೆದು |
ಪೂತಮಾಯ್ತಿದರಿಂದಲೀ ಧರಾತಳವು |
ಭೂತಳದೊಳಿದರೊಳಗೆ ಶಾಖೋಪಶಾಖೆ |
ಸಂಜಾತವಾಯಿತು ಇದುವೇ ಗುರು ಪರಂಪರೆಯು||೧೪||
ಗುರುವಿನಿಂದುಪದೇಶವನು ಪಡೆದ ಶಿಷ್ಯ ನಿಜ।
ಗುರುಪರಮ ಗುರುವು | ಪರಮೇಷ್ಠಿ ಗುರುವೆಂಬ|
ಗುರುನಾಮವನು ಕೂಡೆ। ನಿಜನಾಮವೆರಸಿ ।
ಸಂಸ್ಮರಿಸಿ ತಾ ಮೊದಲು ಬಳಿಕೇಕ ಚಿತದಲಿ ||೧೫||
ಛಂದಸ್ಸು ಋಷಿದೇವತಾ ಧ್ಯಾನಸಹಿತ।
ಗುರುವಿನಿಂದ ಪಡೆದಿರುವ ಮಹಾವಾಕ್ಯ ಮಂತ್ರವನು।
ಚಂದದಿ ಜಪಿಸಿ | ತಜ್ಜಪವಾ ಗುರುಪದಕೆ |
ಮುದದಿಂದಲರ್ಪಿಸಬೇಕು ಮುಕ್ತಿ ಬಯಸುವನು||೧೬||
ಅವಿಧಿ ಕೃನ್ನರಕ ಮಶ್ನುತೆ ಎಂದು ಶೃತಿ
ಪೇಳಲವಿಧಿಯಿಂ ಮಳ್ಳ ಜಪ ವ್ಯರ್ಥವೆನಿಸುವುದು।
ಸುವಿವೇಕಿ ವಿಧಿಪೂರ್ವಕೋಪದೇಶವ ಪಡೆದು |
ಅವಿರತಂ ಗುರುಶಂಕರನ ಭಜಿಸ ಬೇಕೈ
0 ಕಾಮೆಂಟ್‌ಗಳು