|| ಪಾಂಡುರಂಗ ಸ್ತುತಿ ||
ನೆರೆ ನಂಬಿದೆ ಮದ್ ಹೃದಯ ಮಂಟಪದೊಳು
ಪರಿಶೋಭಿಸುತಿರು ಪಾಂಡುರಂಗ || ಪ ||
ಶರಣ ಜನರ ಸಂಸಾರ ಮಹಾ ಭಯ |
ಚರಣ ಕರುಣ ಸಿರಿ ಪಾಂಡುರಂಗ ||ಅ.ಪ.||
ಪರದೇವನೆ ನಿನ್ನ ಲೀಲಾ ಸ್ತುತಿಯನು !
ನೀರು ಎನಗೆ ಕೊಡು ಪಾಂಡುರಂಗ
ಪರರಾಪೇಕ್ಷೆಯ ತೊರೆಸಿ ನಿರಂತರ
ಪರಗತಿ ಪಥ ತೋರೋ ಪಾಂಡುರಂಗ ||೧||
ನೆರೆದಿಹ ಬಹು ಜನರೊಳಿದ್ದರು
ಮನ ಸ್ಥಿರವಿಡು ನಿನ್ನಲಿ ಪಾಂಡುರಂಗ
ಪರಿಪರಿ ಕೆಲಸವು ನಿನ್ನ ಮಹಾಪೂಜೆ
ನಿರುತ ಎನಗೆ ಕೊಡು ಪಾಂಡುರಂಗ ||೨||
ಸುಖವಾಗಲಿ ಬಹು ದುಃಖವಾಗಲಿ
ಸಖ ನೀನಾಗಿರು ಪಾಂಡುರಂಗ
ನಿಖಿಲಾಂತರ್ಗತ ವಾಸ ವಿಠಲ ತವ
ಪಂಕಜ ಮುಖ ತೋರೋ ಪಾಂಡುರಂಗ ||೩||
0 ಕಾಮೆಂಟ್‌ಗಳು