|| ದುರ್ಗಾಪರಮೇಶ್ವರಿ ಸ್ತುತಿ ||
kannadabhajanlyrics.blogspot.com |
ಎಷ್ಟೊಂದು ಅಲಂಕಾರ ಎಷ್ಟೊಂದು ಶೃಂಗಾರ
ಏನೆಂದು ಹೊಗಳಲಿ ಅಮ್ಮ ನಿನ್ನ
ಏಕಾಂಬರೇಶ್ವರಿ ದುರ್ಗಾ ಪರಮೇಶ್ವರಿ
ಏಳೇಳು ಜನ್ಮದ ಪುಣ್ಯವಮ್ಮ ನಮಗೆ
ಏಳೇಳು ಜನ್ಮದ ಪುಣ್ಯವಮ್ಮ
ಕ್ಷೀರಾಬ್ಧಿ ಶೇಖರಿ ತಣಿದಿರುವೆ ಅಮ್ಮ
ಪನ್ನೀರಿನಿಂದಲಿ ನಿಂದಿಹೆನಮ್ಮ
ಪಂಚಾಮೃತವನು ಸವಿದಿಹೆಯಮ್ಮ
ಮಧುವನ್ನು ಕುಡಿದು ಸುಖಿಸಿದೆಯಮ್ಮ ||೧||
ಅರಿಶಿನ ಗಂಧದ ಲೇಪನದಿಂದ ಕುಂಕುಮ
ಚಂದನ ಶೃಂಗಾರದಿಂದ
ಪಟ್ಟೆ ಪಿತಾಂಬರ ಎಷ್ಟೊಂದು ಚೆಂದ
ನಿನ್ನ ನೋಡುವುದು ಕಣ್ಣಿಗಾನಂದ ||೨||
ಮಲ್ಲಿಗೆ ಸಂಪಿಗೆ ಜಾಜಿ ಸೇವಂತಿಗೆ
ಮಲ್ಲೆ ಗುಲಾಬಿ ಪರಿಮಳವಮ್ಮ
ಬಗೆಬಗೆ ಪುಷ್ಪ ಅಲಂಕಾರ ನಿನಗಮ್ಮ
ಇಂದಿನ ದಿನವೇ ಶುಭದಿನವಮ್ಮ ||೩||
ಝಗ ಝಗಿಸುವ ಧೂಪ ದೀಪ ನಿನಗಮ್ಮ
ಕರ್ಪೂರದಾರತಿ ಬೆಳಗುವೆನಮ್ಮ
ಕಲ್ಯಾಣಿ ಕಾತ್ಯಾಯಿನಿ ದೇವಿ ನೀನಮ್ಮ
ಕಾಮಿತ ವರ ನೀಡಿ ಕರುಣಿಸು ಬಾರಮ್ಮ ||೪||
ಭಕ್ತರ ಮೊರೆ ಕೇಳಿ ಬಳಿಬಂದು ನಿಲ್ಲಮ್ಮ
ಭಕ್ತಿ ಭಾಗ್ಯವ ಕೊಟ್ಟು ಅಭಯವ ನೀಡಮ್ಮ
ಬಾಲ ಗಣಪನ ಜನನಿ ಅಮ್ಮ ಪೊರೆಯಮ್ಮ
ಬಾಗಿನ ನಮಿಸಿ ಇಂದು ಮಂಗಳವ ಹಾಡುವೆ ||೫||
0 ಕಾಮೆಂಟ್‌ಗಳು