ಶ್ರೀರಾಮ ಸ್ತುತಿ - ಕೋದಂಡರಾಮ್ ಕೋದಂಡರಾಮ್

|| ಶ್ರೀರಾಮ ಸ್ತುತಿ ||

ತಾಳ : ಏಕತಾಳ




ಕೋದಂಡರಾಮ್ | ಕೋದಂಡರಾಮ್ ||

ಕೋದಂಡ ರಾಮ್ | ಪಾಹಿ ಕೋದಂಡರಾಮ್ | ಪ:



ಶ್ರೀಕರ ತ್ರಾಹಿ | ಭಾಸ್ಕರದೇಹಿ |

ಲೋಕೇಶಾಹಿ ಸದ್ಗುಣ ದೇಹಿ |

ನೀರೊಳು ದೂರಿ | ಪಾತಾಳ ಸೇರಿ |

ತಮನೊಳು ಹೋರಿದ ಮತ್ಸಾವತಾರಿ ||೧||


ನಾಕೇಶಬ್ರಹ್ಮ | ಪ್ರಾರ್ಥಿಪೆ ನಿಮ್ಮ |

ಆದಿ ನೀ ಕೂರ್ಮ | ಪಾಲಿಸು ನಮ್ಮ ||೨||


ಕಟಿರೂಪತಾಳಿ | ದನುಜರ ಸೀಳಿ |

ಧರೆಯಮರಾಳಿ | ಪೊರೆಯಕರ್ನಾಳಿ ||೩||


ನರಹರಿರೂಪ | ತಾಳಿ ಪ್ರತಾಪ |

ತೋರಿದ ಭೂಪ | ಪ್ರೌಢಕಲಾಪ ||೪||


ಬಲಿಯನು ಮೆಟ್ಟಿ | ಹೃದಯವ ಕುಟ್ಟಿ |

ಪಾತಾಳಕಟ್ಟಿದ | ವಾಮನ ಜಟ್ಟಿ ||೫||


ದಶರಥ ಬಾಲ | ದಶಾನುಕೂಲ |

ದಶಮುಖಕಾಲಾ | ದಶಾನುಕೂಲ ||೬||


ಧಾತ್ರೀಶವಂಶ | ಮಾಡಿದ ಧ್ವಂಸ |

ಮುನಿಕುಲ ಹಂಸ | ಸತ್ಯ ಪ್ರಶಂಸ ||೭||


ಗೋಕುಲ ರಕ್ಷಾ | ಸುಜನ ಸಂರಕ್ಷಾ |

ಮಾತುಳ ಶಿಕ್ಷಾ | ಕಂಜದಳಾಕ್ಷಾ ||೮||


ಬೆತ್ತಲೆ ನಿಂದು | ಭೌದ್ಧ ನೀ ಬಂದು |

ಭಕ್ತಿಯೊಳಿಂದು | ಪ್ರಾರ್ಥಿಪೆನೆಂದು ||೯||


ಕಲ್ಕ್ಯಾವತಾರ | ಕಲಿಮಲ ದೂರ |

ದುರಿತಾಪಹಾರ | ಸುಜನೋದ್ಧಾರ ||೧0||







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು