ಶ್ರೀರಾಮ ಸ್ತುತಿ - ದೇವರ ದೇವನೆ ದಶರಥ ಪುತ್ರನೇ ರಾಮಾ ರಾಮಾ, Devara Devane Dasharatha Putrane Rama Rama

 || ಶ್ರೀರಾಮ ಸ್ತುತಿ ||




ದೇವರ ದೇವನೆ ದಶರಥ ಪುತ್ರನೇ ರಾಮಾ ರಾಮಾ

ಎನ್ನ ತಪ್ಪನ್ನು ಮನ್ನಿಸಿ ಕಾಯೋ ರಾಮಾ ರಾಮಾ 


ಆಗು ಹೋಗುಗಳೆನಗುಂಡು ಶ್ರೀ ರಾಮಾ ರಾಮಾ

 ಪಾಪಕರ್ಮಗಳು ಎನ್ನಲುಂಟು ಶ್ರೀ ರಾಮಾ ರಾಮಾ

 ಜನನ-ಮರಣಗಳು ಎನಗುಂಟು ಶ್ರೀ ರಾಮಾ ರಾಮಾ

ಪಾಪ ಪುಣ್ಯದ ಅರಿವೇ ಇಲ್ಲ ಶ್ರೀ ರಾಮಾ ರಾಮಾ


ಗಂಧ ಪುಷ್ಪಗಳು ಎನ್ನಲಿಲ್ಲಾ ಶ್ರೀ ರಾಮಾ ರಾಮಾ

ಧಾನ್ಯ ವಸ್ತುಗಳು ಎನಗಿಲ್ಲಾ ಶ್ರೀ ರಾಮಾ ರಾಮಾ

ಭಕ್ತಿ ಭಾವವ ತಿಳಿದವರಿಲ್ಲ ಶ್ರೀ ರಾಮಾ ರಾಮಾ

ಪಾಪ ಪುಣ್ಯದ ಅರಿವೇ ಇಲ್ಲ ಶ್ರೀ ರಾಮಾ ರಾಮಾ



ಧಾನಿಯು ನೀನು ದರಿದ್ರನು ನಾನು ರಾಮಾ ರಾಮಾ

ದೀನನು ನಾನು ದಾನಿಯು ನೀನೂ  ರಾಮಾ ರಾಮಾ

ಬಡವನು ನಾನು ಬಲವಂತ ನೀನು ರಾಮಾ ರಾಮಾ

ಶಿಕ್ಷಕ ನೀನೆ ರಕ್ಷಕ ನೀನೆ .......ರಾಮಾ ರಾಮಾ


ತಾಳದಮ್ಮಡಿಗಳೆನ್ನಲಿಲ್ಲ ಶ್ರೀ ರಾಮಾ ರಾಮಾ

ತಂತಿವಾದ್ಯಗಳು ಮೊದಲೇ ಇಲ್ಲ ರಾಮಾ ರಾಮಾ

ಏಕದಾರಿಯು ಉಳಿದೇ ಇಲ್ಲಾ ರಾಮಾ ರಾಮಾ

ಭಜನೆಯ ಮಾಡಲು ಭಕ್ತರೆ ಇಲ್ಲ ರಾಮಾ ರಾಮಾ



ನೃತ್ಯಗಾನಗಳು ತಿಳಿದೇ ಇಲ್ಲ ಶ್ರೀ ರಾಮಾ ರಾಮಾ

ಮೃತ್ಯು ಪಾಶಕ ಸಿಕ್ಕಿದೆ ನಾನು ರಾಮಾ ರಾಮಾ

ಅಕ್ಕರೆಯಿಂದಲಿ ಎನ್ನನು ಸಲಹೋ ರಾಮಾ ರಾಮಾ

ಅದ್ಭುತ ಲೀಲೆಯ ತೋರಿಸಿ ಕಾಯೋ ರಾಮಾ ರಾಮಾ



ಉಳಿದ ವಾದ್ಯವ ನುಡಿಸುವರಿಲ್ಲಾ ಶ್ರೀ ರಾಮಾ ರಾಮಾ

ಮಿಕ್ಕ ವಾದ್ಯವ ಕಳೆವರು ಎಲ್ಲಾ ರಾಮಾ ರಾಮಾ

ಬೇಗನೇ ಬಂದು ಉತ್ತರ ನೀಡೋ ರಾಮಾ ರಾಮಾ

ಉತ್ತಮ ಬುದ್ಧಿಯ ನೀಡೋ ಎನಗೆ ರಾಮಾ ರಾಮಾ



ಹಣ್ಣು ಕಾಯಿಯ ತಂದವರಿಲ್ಲ ಶ್ರೀ ರಾಮಾ ರಾಮಾ

ದೂಪ ದೀಪವ ಹಚ್ಚುವರಿಲ್ಲ ರಾಮಾ ರಾಮಾ

ಮುಡಿಪು ಕಾಣಿಕೆ ಹಾಕುವವರಿಲ್ಲಾ ರಾಮಾ ರಾಮಾ

ಮುಕ್ತಿ ಪಂಥವ ಹಿಡಿದವರಿಲ್ಲ ರಾಮಾ ರಾಮಾ


ನೀನೇ ಎಂಬುದ ಅರಿತವರಿಲ್ಲಾ ಶ್ರೀ ರಾಮಾ ರಾಮಾ

ನಾನು ಎಂಬುದ ಬಿಟ್ಟೆ ಇಲ್ಲಾ ರಾಮಾ ರಾಮಾ

ಭಕ್ತಿ ಎಂಬುದ ತಿಳಿದವರಿಲ್ಲಾ ರಾಮಾ ರಾಮಾ

ಮುಕ್ತಿ ಎಂಬುದ ಮರೆತಿಹರೆಲ್ಲ ರಾಮಾ ರಾಮಾ


ಯುಕ್ತಿಯಿಂದಲೇ ನಡೆಯುತ್ತಿಹರು ಶ್ರೀ ರಾಮಾ ರಾಮಾ

ಯೋಗ್ಯತೆಯನ್ನು ಬಿಡುತಲಿಹರು ರಾಮಾ ರಾಮಾ

ಹಣದಾಸೆಗೆ ಕೈ ಒಡ್ಡುತಲಿಹರು ರಾಮಾ ರಾಮಾ

ನಿನ್ನ ಸ್ಮರಣೆಯ ಮರೆತಿಹರಲ್ಲ ರಾಮಾ ರಾಮಾ  



ಅಂಧಕಾರದಿ ನಿಂದರು ಎಲ್ಲ ಶ್ರೀ ರಾಮಾ ರಾಮಾ

ನಿಂದಕರೆಲ್ಲ ಮರೆತರು ನಿನ್ನ ರಾಮಾ ರಾಮಾ

ಮಮತೆಯ ತೊಟ್ಟು ಮರೆತರು ನಿನ್ನ ರಾಮಾ ರಾಮಾ

ನಿತ್ಯವು ಭಜನೆಗೆ ಬರುವವರಿಲ್ಲ ರಾಮಾ ರಾಮಾ


ದುಷ್ಟರು ಇವರು ಹೇಳುವುದೇನು ಶ್ರೀ ರಾಮಾ ರಾಮಾ

ಕಷ್ಟವ ಹರಿಸಿ ಕಾಯೋ ನೀನು  ರಾಮಾ ರಾಮಾ

ಕಂಡೆನು ನಿನ್ನಯ ಪಾದವ ನೀನು ರಾಮಾ ರಾಮಾ

ಮನ್ನಿಸಿ ಕಾಯೊ ಎಮ್ಮನು ನೀನು ರಾಮಾ ರಾಮಾ




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು