|| ತತ್ವ ವಿಚಾರ ಪ್ರಕರಣ ||
kannadabhajanlyrics.blogspot.com |
ಜ್ಞಾನವೊಂದೇ ಸಾಕು ಮುಕ್ತಿಗೆ |
ಮಿಕ್ಕಾದ ಮೌನ ಧ್ಯಾನ ನೇಮಗಳೆಲ್ಲ ಭುಕ್ತಿಗೇ (ಭಕ್ತಿಗೆ)
ನಾನು ನನ್ನದು ಎಂ ಬ ಜಗದಭಿ।
ಮಾನವಲ್ಲವೇ ನಿಖಿಲ ಬಂಧನ।
ಮಾನಸದ ಕಲ್ಪಿತವೇ ಸರಿಯನು।
ಮಾನವಿನ್ನಿದಕ್ಕಿಲ್ಲವೆಂಬುವ ॥ಅ.ಪ.॥
ಶುಕ್ತಿಯಲಿ ರಜ ತತ್ತ್ವ ತೋರ್ಪಂತೆ।
ಈ ಜಗವು ಮಾಯಾ।
ಶಕ್ತಿಯಿಂ ಕಾಣುವುದು ನಿಜದಂತೇ।
ಯುಕ್ತಿಯಿಂದೀ ನಾಮರೂಪ।
ವ್ಯಕ್ತ ಜಾತವ ಕಳದು ವ್ಯಕ್ತಾ ವ್ಯಕ್ತ ಲಕ್ಷಣ।
ಶಕ್ತಿ ಕಾರ್ಯೋನ್ಮುಕ್ತನೇ ನಾನೆಂಬ ಸಮ್ಯ || ೧ ||
ಮೃತ್ತಿನಲಿ ಕಲಿಸಿದ ವಸ್ತುಗಳು। ಬೇರೆನಿಸಿ ತೋರದೆ।
ಮೃತ್ತೆಯಾಗಿಯೆ ಬೆಳಗುವಂದದಲೀ।
ತತ್ತ್ವದಾಶ್ರಯದಿಂದ ಕಲ್ಪಿತ।
ಮೊತ್ತವಂ ನೆರೆ ಕಳಿಯೆ ಭ್ರಮೆಯಿಂ।
ಚಿತ್ತಿನಲಿ ಕಲ್ಪಿಸಿದ ಜಗವಿದು।
ಚಿತ್ತೆಯಾಗುವುದೆಂಬ ಪೂರ್ಣ ॥ ೨ ||
ಪರಮ ಸದ್ಗುರು ಶಂಕರಾರ್ಯನಲೀ।
ಮನವಿಟ್ಟು ತತ್ತ್ವವ।
ನರಿತು ನಿಜಗುರು ಚರಣಕಮಲದಲೀ।
ನಿರುಪಮಿತ ನಿರ್ಗುಣ ನಿರಂಜನ।
ನಿರಘ ನಿರ್ದ್ವಯ ನಿತ್ಯ ನಿರ್ಮಲ।
ನಿರವಧಿಕ ನಿರ್ಮಾಯ ನಿಷ್ಕ್ರಿಯ ನಿರತಿಶಯ
ನಾನೆಂಬ ದಿವ್ಯ ॥ಜ್ಞಾನ।|
0 ಕಾಮೆಂಟ್‌ಗಳು