ಶ್ರೀರಾಮ ಸ್ತುತಿ - ಸೀತಾಪತೇ ರಾಮ ಸೀತಾಪತೇ ರಾಮ, Seethapathe Rama

|| ಶ್ರೀರಾಮ ಸ್ತುತಿ ||





ಸೀತಾಪತೇ ರಾಮ ಸೀತಾಪತೇ ರಾಮ |

ಸೀತಾಪತೇ ರಾಮ ಶ್ರೀ ರಘುರಾಮ ||ಪ||


ದಶರಥ ನೃಪಬಾಲ | ದಾನವ ಕುಲಕಾಲ ||

ಧರಣಿ ಜಾಲೋಲ | ದಾನ ಸುಶೀಲ ||೧||


ಕರವೃತಶರಚಾಪ | ಕಂದರ್ಪಸಮರೂಪ |

ತರಣಿ ಕುಲದೀಪ | ಕರುಣ ಪ್ರತಾಪ  ||೨||


ರಘುಕುಲಾಂಬುಧಿಸೋಮ|ರಾಕ್ಷಸಕುಲಭೀಮ |

ರಣಚಂಡವಿಕ್ರಮ | ರಾಜಲಲಾಮ  ||೩||


ಸದ್ಗುಣಗಣಭೂಷ | ಸರ್ವಭೂತಾವಾಸ |

ಸಜ್ಜನಪರಿತೋಷ | ಸರ್ವಲೋಕೇಶ ||೪||


ವನಜನಿರ್ಮಿತಮಾಲ | ವಾನರಕುಲಪಾಲ |

ಕನಕಾಂಕಿತಚೇಲ | ಕರುಣಾಲವಾಲ ||೫||


ಸಾರಸರಸನೇತ್ರ | ಸನಕಾದಿನುತಪಾತ್ರ |

ನೀರದನಿಭಗಾತ್ರ | ನಿರುಪಮಕ್ಷಾತ್ರ ||೬||


ಶ್ರೀತಿರುಪತಿವಾಸ | ಶ್ರೀದಾಸಪರಿತೋಷ |

ಶ್ರೀಸರ್ವಲೋಕೇಶ | ಶ್ರೀವೇಂಕಟೇಶ ||೭||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು