|| ಲಕ್ಷ್ಮಿ ಹಾಡು ||
ಬಂದಾಳು ನಮ್ಮ ಮನೆಗೆ ಶ್ರೀ ಮಹಾಲಕುಮಿ
ಸಂದೇಹವಿಲ್ಲದಲೆ ||ಪ ||
ಬಂದಾಳು ನಮ್ಮ ಮನೆಗೆ ನಿಂದಾಳು ಗೃಹದಲಿ
ನಂದ ಕಂದನ ರಾಣಿ ಇಂದಿರೆ ನಮ್ಮ ಮನೆಗೆ||ಅ.ಪ.||
ಹೆಜ್ಜೆ ಯ ಮೇಲೆ ಹೆಜ್ಜೆ ನಿಕ್ಕುತ
ಗೆಜ್ಜೆಯ ಕಾಲ ಘಲ್ಲು ಘಲ್ಲು ರೆನುತಾ
ಮೂರ್ಜಗವ ಮೋಹಿಸುತಾ ಮುರಹರನ ರಾಣಿಯು
ಸಂಪತ್ತು ಕೊಡಲಿಕ್ಕೆ ವೆಂಕಟೇಶನ ಸಹಿತ ||೧||
ಮಾಸ ಶ್ರಾವಣ ಶುಕ್ಲ ಶುಕ್ರವಾರ ಪೌರ್ಣಿಮೆ
ದಿನಮುನ್ನ ಭೂಸುರರೆಲ್ಲಾ ಕೂಡಿ
ಸಾಸಿರ ನಾಮ ಪಾಡಿ ವಾಸವಾಗಿರಲಿಕ್ಕೆ
ವಾಸುದೇವನ ಸಹಿತಾ ||೨||
ಉಟ್ಟ ಪೀತಾಂಬರ ಹೊಳೆಯುತಾ ಕರದಲಿ
ಘಟ್ಟಿ ಕಂಕಣ ಹಿಡಿಯುತ
ಸೃಷ್ಟಿಗೊಡೆಯ ನಮ್ಮ ಪುರಂದರವಿಠಲನ
ಪಟ್ಟದರಸಿ ನಮಗೆ ಇಷ್ಟಾರ್ಥ ಕೊಡುವುದಕೆ ||೩||
0 ಕಾಮೆಂಟ್ಗಳು