ಗಣಪತಿ ಸ್ತುತಿ - ಗಜಮುಖ ನಿನ್ನನೆ ಭಜಿಸುವೆ ಸತತದಿ, Ganapati Ninnane Bhajisuve

|| ಗಣಪತಿ ಸ್ತುತಿ ||




ಗಜಮುಖ ನಿನ್ನನೆ ಭಜಿಸುವೆ ಸತತದಿ |

ನಿಜಮತಿಯನೇ ನೀಡೋ ||ಪ||

ಭುಜಗಭೂಷಣಸುತ ರಜತನು ಕಳೆಯುತ |

ಗಜವದನ ತೋರೊ ||ಅ.ಪ.


ಮೋದಕಪ್ರಿಯನೆ ಆದರದಲಿ

ನಿನ್ನ ಪಾದಕೆ ಎರಗುವೆನೊ |

ನೀ ದಯದಲಿ ಹರಿ ವಿಶ್ವರೂಪವ ನಿನ್ನ |

ಹೃದಯದಿ ಇನ್ನು ತೋರೊ||೧||


ಸೊಂಡಿಲಗಣಪನೆ ಹಿಂಡುದೈವಗಳಿಗೆ

ಇಂದು ಪ್ರಥಮ ನೀನೇ |

ಕಂಡ ಮಾತ್ರದಿ ಎಮ್ಮ

ವಿಘ್ನಗಳೆಲ್ಲವು ಬೆಂಡಾಗುವುದಿನ್ನೆ ।|೨।|


ಅಂಬರದ ಅಭಿಮಾನಿಯೆ ಸತತದಿ

ಹರಿ ನೆನೆಯುವ ಹಂಬಲ ನೀಡೋ ।

ಕುಂಭಿಣೀಶ ಗೋಪಾಲಕೃಷ್ಣ ವಿಠಲನ

ಮನದಿ ನೀ ತೋರೋ ||೩||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು