ಎಲ್ಲವೂ ನಿನ್ನಿಚ್ಛೆಯಂತೆ ನಡೆದಿರಲು
ನೀನೆ ಭವಸಾಗರವ ದಾಟಿಸುವ ಹಡಗು||ಪ||
ನಿನ್ನಿಚ್ಛೆಯ ನೀ ಪೂರೈಸುತಿರಲು
ತಮ್ಮ ಗೈಮೆಯಿದೆಂದು ತಿಳಿವರೀ ಜನರು||ಅ.ಪ.||
ಕೆಸರಿನಲಿ ಸಲಗವನು ಹಿಡಿಯುವಳು ನೀನು
ಹೆಳವನನು ಗಿರಿಯ ತುದಿಗೊಯ್ಯುವಳು ನೀನು
ಕೆಲವರಿಗೆ ಬ್ರಹ್ಮಪದವಿತ್ತು ಹಲವರನು
ಭವ ಜಲಧಿ ಸುಳಿಯೊಳಗೆ ಎಳೆಯುವಳು ನೀನು||೧||
ನೀನು ಚಾಲನಶಕ್ತಿ ನಾನೊಂದು ಯಂತ್ರ
ನಾನೊಂದು ಬರಿಯ ಮನೆ ನೀನದರ ಮಂತ್ರ
ನಾನೊಂದು ರಥವಾಗೆ ನೀನದರ ರಥಿಕ
ನೀ ನಡೆಸೆ ನಾ ನಡೆವೆ ನಿನ್ನದೀ ಲೋಕ||೨||
0 ಕಾಮೆಂಟ್‌ಗಳು