|| ದುರ್ಗಾ ಸ್ತುತಿ ||
ರಚನೆ : ಮತ್ತೂರು ನಂದಕುಮಾರ.
ಭವತಾರಿಣಿ ನವರಾತ್ರಿಯ ದೇವಿ
ದುರ್ಗೇ ತಾಯಿ ಭವಾನಿ |
ಮಮ ಮಾತರ್ನಮೋ - ಹರಸೌ
ಶಂಕರಿ ಸೇವಕರಾವು ಶಿವಾನಿ | ಪ ||
ನೀನೇ ಮಂಗಳೆ ನೀನೇ ಸರಸತಿ
ನೀ ಲಕ್ಷ್ಮಿಯು ಪರಮೇಶಿ |
ನೀ ಜಯಕಾರಿಣಿ ನೀ ಶುಭದಾಯಿನಿ
ಮರೆತರೆ ನಾ ಪರದೇಶಿ || ೧ ||
ಹರಿಯುವ ನೀರಲಿ ಚಿಗುರಿದ ಎಲೆಯಲಿ
ಅರಳುವ ಹೂವಲಿ ನೀನು |
ತಾಯಿಯ ಅದ್ಭುತ ಮಾಯೆಯ ಕಂಡೆನೆ
ಭವದಲಿ ವಿಸ್ಮಿತ ನಾನು || ೨ ||
ಭುವಿಯೊಳಗೆಲ್ಲೆಡೆ ನಿನ್ನದೆ ಬಿಂಬ
ಗಿರಿಗುಹ ಕಾನನ ನೀನೆ |
ಮಹಿಮೆಯನರಿವಡೆ ತರವೇ ಮಾತಃ
ಅರಿವಿನ ಆಚೆಗು ನೀನೆ || ೩ ||
1 ಕಾಮೆಂಟ್‌ಗಳು
Hi hhhhh
ಪ್ರತ್ಯುತ್ತರಅಳಿಸಿ