|| ಹನುಮ ಸ್ತುತಿ ||
Belaguru Guruji photos, belaguru Swamiji images |
ನಡಿ ನಡಿ ನಮ್ಮ ಮನೆಗೆ ಶ್ರೀಮದಾಂಜನೇಯ |
ನಡಿ ನಡಿ ನಮ್ಮ ಮನೆಗೆ ನಡಮುಡಿ ಹಾಸುವೆ |
ನಡೆಯದಿದ್ದರೆ ನಿನ್ನ ಬಿಡುವೇನೇನಯ್ಯಾ ಹನುಮ||ಪ||
ರಾಮದೂತಾ ಎಂದು ರಕ್ಕಸರ ಕುಲವ ಕೊಂದೆ
ರಾಮಮುದ್ರಿಕೆ ತಂದು ರಮಣೀಗೆ ದಯಾಸಿಂಧು||೧||
ಭೀಮಸೇನ ಎಂದು ಕೌರವರ ಕುಲವ ಕೊಂದೆ |
ತೊಡೆಯ ಸೀಳಿದೆ ಬಂದು ಪಾಲಿಸು ದಯಾಸಿಂಧು||೨||
ವೇದವ್ಯಾಸರ ಪೂಜೆ ಭೇದವಿಲ್ಲದೆ ಮಾಡಿ |
ವೇಲಾಪುರಿಯ ವಾಸ ವರದ ವೆಂಕಟವಿಠಲನ ದಾಸ||೩||
0 ಕಾಮೆಂಟ್‌ಗಳು