|| ಗುರು ಸ್ತುತಿ||
kannadabhajanlyrics.blogspot.com, belaguru Swamiji images |
ಗುರುಮಹಾರಾಜ ಜಗವನುದ್ಧರಿಸಲು
ಯೋಗ ನಿದ್ರೆಯಿಂದ ಬೇಗ ನೀನೇಳಯ್ಯ ||ಪ ||
ಸಗುಣ ಭೂಷಣ ನಿನ್ನ ಪೊಗಳಿ ಪಾಡುವರಿಂದ
ಬಗೆ ಬಗೆ ಸೇವೆಯ ಕೈಕೊಂಡು ಪೊರೆಯಲು||ಅ.ಪ.||
ಮಾಣಗಂಗಾ ನದಿಯಲ್ಲಿ ಸ್ನಾನ ಸಂಧ್ಯವಗೈದು
ಜಾನಕೀರಮಣನ ಮಾನಸ ಪೂಜೆಯ ಮಾಡಿ |
ನಿನ್ನ ಯಾಚಿಸೆಬಂದ ದೀನ ಅತಿಥಿಗಳಿಗೆ
ಘನರಾಮ ತಾರಕ ಮಂತ್ರ ದೀಕ್ಷವ ನೀಡೆ ||೧||
ಮಾರುತಿ ರೂಪವೆ ನರರು ನಿದ್ರಿಸುವಂತೆ
ಶ್ರೀರಘುವರನೊಳು ಬೆರೆತು ಸುಖಿಸುತಿರೆ |
ಅರಿಯದ ನರರಿಗೆ ಪರತತ್ವ ಬೋಧಿಸೆ
ಯಾರಿದ್ದರೆಂಬುದ ಅರಿತು ನೀನೇಳಯ್ಯಾ||೨||
ಲೋಕಪಾಲನೆ ನಿನನಗೆ ಯಾಕಿಷ್ಟು ನಿರ್ದಯ
ವೆಂಕಟರಮಣ ಸಂಸೇವಿತ ನುತ ಪಾದ |
ಕಾಕಡಾರತೀ ತಂದು ಏಕಮನಸಿನಿಂದ
ಈಗ ನಾ ಬೆಳಗುವೆ ರಾಜೀವಲೋಚನ||೩||
0 ಕಾಮೆಂಟ್‌ಗಳು