|| ಗಣಪತಿ ಸ್ತುತಿ ||
Composed by - ಶ್ರೀ ಜಯರಾಮ ವಿಠಲ |
ರಾಗ: ಅಭೇರಿ
ತಾಳ: ಆದಿ
ಮಹಾಗಣಪತೇ ಮಾತಂಗವದನ
ಮೂಷಿಕವಾಹನ ಮಂಗಳಚರಣ ||ಪ||
ವಿನಾಯಕ ನೀ ವಿಘ್ರಕೋಟಿ ಹರಣ
ವಾಮನರೂಪ ವಲ್ಲಭನೇ ಷಣ್ಮುಖಸೋದರ
ಸುರಮುನಿ ಪೂಜಿತ ಶರಣೆಂಬೆ
ನಿನಗೆ ಶಂಭುಕುಮಾರ ||೧||
ಲಂಬೋದರನೇ ಲಕುಮಿಕರನೇ
ಅಂಬಾಸುತನೇ ಆದಿಪೂಜ್ಯನೇ
ದಶಭುಜರೂಪನೆ ದೂರ್ವಾಪ್ರಿಯನೆ
ದುರಿತನಿವಾರಣ ದೀನರಕ್ಷಣ ||೨||
ಪಾಶಾಂಕುಶಧರ ಪಾಪವಿಮೋಚನ
ಪಾವನಸ್ಮರಣ ಪತಿತಪಾವನ
ಜಗದೊಳು ನಿನ್ನಯ ನಾಮವ ಪೊಗಳುವೆ
ಜಯರಾಮ ವಿದ್ಧಲಗೆ ನೀ ಅತಿಪ್ರಿಯನೆ ||೩||
0 ಕಾಮೆಂಟ್‌ಗಳು