|| ಗಣಪತಿ ಸ್ತುತಿ ||
ರಚನೆ : ನಾರಾಯಣ ತೀರ್ಥರು
ಜಯ ಜಯ ಸ್ವಾಮಿನ್ ಜಯ ಜಯ
ಜಯ ಜಯ ಸ್ವಾಮಿನ್ ಜಯ ಜಯ |ಪ.|
ಜಯ ಜಯ ಜಿತವೈರಿ ವರ್ಗ ಪ್ರಚಂಡ
ಜಯ ಜಯ ಗಜಮುಖ ಜಯ ವಕ್ರತುಂಡ ||ಅ.ಪ.||
ಮೂಷಕವಾಹನ ಮುನಿಜನ ವಂದ್ಯ
ದೋಷರಹಿತ ದಳಿತಾಸುರಬೃಂದ
ಶೇಷಭೂಷಣ ಶೈವ ವಾರಿಧಿ ಚಂದ್ರ
ಪೋಷಿತ ಪರಿಜನ ಪುಣ್ಯಕಕಂಧ ||೨||
ಅದ್ರಿಸುತಾಸುತ ಅನವದ್ಯ ಚರಿತ
ಭದ್ರ ಭಕ್ತ ಭವ ಭಯಹರ ಮುದಿತ
ರುದ್ರೋದಿತ ಋಜು ಮಸ್ತಕ ಸಹಿತ
ಸದ್ರೂಪ ಸರಸಿಜ ಸಮುದಿತ ವಿನುತ ||೩||
ಲಂಬೋದರ ಧೀರ ಲಾವಣ್ಯ ಸಾರ
ಕಂಬು ಸುಧಾನಿಧಿ ಕರ್ಪೂರಗೌರ
ಸಾಂಬಸದಾಶಿವ ಸಮ್ಮತಿ ಚತುರ
ಸಾಮವೇದ ಗೀತ ಸಕಲಾಧಾರ ||೪||
ಶಕ್ರಾದಿ ಸುರಗಣ ಸನ್ನುತ ಚರಣ
ಶಾತಕುಂಭ ಮಣಿ ದಿವ್ಯಾಭರಣ
ಧಿಕೃತ ಘನ ವಿಘ್ನ ತಿಮಿರಾವರಣ
ಧೀರ ನಾರಾಯಣ ತೀರ್ಥ ಸುಕರುಣ ||೫||
0 ಕಾಮೆಂಟ್‌ಗಳು