ಶ್ರೀ ಬ್ರಹ್ಮಾನಂದರ ಆರತಿ
ಶ್ರೀ ಗುರುಬ್ರಹ್ಮಾನಂದ ಸಮರ್ಥ ಬೆಳಗುವೆನಾರತಿಯ
ಯೋಗಿವರ್ಯ ಶ್ರೀ ಬ್ರಹ್ಮಚೈತನ್ಯರ
ಕರುಣಾರ್ಚಿತ ಮಾಯಾ ||ಪ||
ಜಗದೋದ್ದಾರ ಭವಭಯದೂರ ಗುಣಪಾರವಾರ
ಜಗದೊಳು ಕಾಮಕ್ರೋಧಾದಿಗಳನು ಜಯಸಿದಿ ಗಂಭೀರ
ಬಗೆಬಗೆಯಿಂದಲಿ ಧರೆಯೊಳು
ಬೆಳೆಸಿದ ರಾಮನಾಮ ಸಾರಾ
ನರಪುರ ರಥಪುರ ವೇಣುಪುರದಲಿ ನಾಮಯಜ್ಞವನ್ನು
ಜರುಗಿಸಿಕರುಣದಿ ಉದ್ದರಿಸಿದಿನೀ ಪಾತಕಿ ಜನರನ್ನು
ಸ್ಮರಿಸುವ ಜನರಿಇಷ್ಟಾರ್ತವ ಪೂರಿಸಿ
ಮಾಡಿದಿ ಧನ್ಯರನು ||
ಇಂದಿರೇಷನ ಸುಂದರ ಮಂದಿರ ವೆಂಕಟಪುರದೊಳಗೆ
ಚಂದದಿ ನಿರ್ಮಿಸಿ ಆನಂದವ ಗೊಳಿಸಿದಿ ಸುರನರ
ಮುನಿಗಳಿಗೆ ಇಂದು ಸಚ್ಚಿದಾನಂದತೆಯನು
ಕೊಡು ಕಿಂಕರ ವೆಂಕಟಗೆ ||
0 ಕಾಮೆಂಟ್ಗಳು