|| ನಿವೇದನಾ ಸ್ತುತಿ ||
Belaguru Swamiji images,kannadabhajanlyricsblogspot.com |
ನೀ ಎನ್ನ ಅವಗುಣವ ಎಣಿಸದಿರು ಪ್ರಭುವೇ
ಸಮದರ್ಶಿ ಎಂದಿಹುದು ನಿನ್ನ ಬಿರುದು
ನಿನ್ನಿಚ್ಛೆಯೊಳು ಎನ್ನ ಪಾರುಗೈ ಪ್ರಭುವೇ
ಎನ್ನ ಅವಗುಣವ ಎಣಿಸದಿರು ಪ್ರಭುವೇ || ಪ ||
ನೀ ಲೋಹವೊಂದಿರುತಿರಲು ದೇವಸನ್ನಿಧಿಯಲ್ಲಿ
ಮತ್ತೊಂದು ಲೋಹವಿರೆ ವ್ಯಾಧಗೃಹದಿ
ಪರುಶಮಣಿ ಮನದಲ್ಲಿ ಭೇದ ಭಾವನೆ ಎಲ್ಲಿ ?
ಚಿನ್ನವನ್ನಾಗಿಪುದು ಚಣಮಾತ್ರದಿ || ೧ ||
ಮಲಿನ ರೂಪದಿ ನೆಲದಿ ಹರಿವ ಜಲವೊಂದಿರಲು
ಕಲುಷವನು ಕಳೆವ ನದಿಯೊಂದು ತಾನಿರಲು
ಹರಿಹರಿದು ಸುರನದಿಯ ಸೇರುತಿರೆ ತಾವೆರಡು
ಪರಮ ಮಂಗಳ ತೀರ್ಥವಹುದಲ್ಲವೇ || ೨ ||
ಜೀವ ಬ್ರಹ್ಮಗಳೊಳಗೆ ಭೇದವಿಹುದೆನುತಿರಲು
ಸೂರದಾಸನು ಇದನ್ನು ಒಪ್ಪದಿಹನು
ಅಜ್ಞಾನದಿಂದಲೇ ಸಕಲ ಭೇದವು ಜಗದಿ
ನಿಜವನರಿತವನಲ್ಲಿ ಭೇದವಿಹುದೇ ? || ೩ ||
0 ಕಾಮೆಂಟ್‌ಗಳು