|| ಗುರುಸ್ತುತಿ ||
kannadabhajanlyrics.blogspot.com |
ಗುರುರಾಯನಂಥಾ ಕರುಣಾಳು
ಕಾಣೆ ನಾ ಈ ಜಗದೊಳು ||ಪ ||
ಏನೊಂದರಿಯದ ಪಾಮರ ನಾನು
ಜ್ಞಾನಭಕುತಿ ವೈರಾಗ್ಯ ರಹಿತನು
ತಾನೊಲಿದೀಗ ಎನ್ನನು ಉದ್ಧರಿಸಿದನು ||೧||
ಮಾಡುವ ಘನ ತುಸು ತಪ್ಪನು ಹಿಡಿವ
ಬೇಡಿಸಿಕೊಳ್ಳದೆ ನೀಡುತ ಪೊರೆವ
ರೂಢಿಗಾದನೋ ಇಹಪರದೊಡೆಯ ||೨||
ತನ್ನವನೆನಿಸಿದ ಮಾತಿಗೆ ಕೂಡಿ
ಮನ್ನಣೆ ಇತ್ತನು ಅಭಯವ ನೀಡಿ
ಇನ್ನೇನು ಹೇಳಲಿ ಈ ಸುಖ ನೋಡಿ ||೩||
ತನ್ನನುಭವ ನಿಜ ಮಾತಿನ ಗುಟ್ಟು
ಎನ್ನೋಳು ಸರಿ ಘನ ತೋರಿಸಿಕೊಟ್ಟು
ಧನ್ಯನ ಮಾಡಿದ ಸೇವೆಯೊಳಿಟ್ಟು ||೪||
ತಂದೆ ತಾಯಿ ಬಂಧು ಬಳಗೆನಗಾಗಿ
ಇಂದು ಸದ್ಗುರು ಮಹಿಪತಿ ಮಹಾಯೋಗಿ
ಕಂದನ ಸಲಹೋ ನೀ ಲೇಸಾಗಿ || ೫ ||
0 ಕಾಮೆಂಟ್‌ಗಳು