|| ರಾಘವೇಂದ್ರ ಸ್ತುತಿ ||
ರಾಗ : ಆನಂದಭೈರವಿ
ತಾಳ : ಆದಿ
ರಾಯ ಬಾರೋ ತಂದೆ ತಾಯಿ ಬಾರೋ
ನಮ್ಮ ಕಾಯಿ ಬಾರೋ
ಮಾಯಿಗಳ ಮರ್ದಿಸಿದ ರಾಘವೇಂದ್ರ
ರಾಯ ಬಾರೊ ರಾಯ ಬಾರೋ ||ಪ||
ವಂದಿಪ ಜನರಿಗೆ ಮಂದಾರ ತರುವಂತೆ
ಕುಂದದಭೀಷ್ಟವ ಸಲಿಸುತಿಪ್ಪ ರಾಯ ಬಾರೋ
ಕುಂದದಭೀಷ್ಟವ ಸಲಿಸುತಿಪ್ಪ - ಸರ್ವಜ್ಞ
ಮಂದನ ಮತಿಗೆ ರಾಘವೇಂದ್ರ ರಾಯ ಬಾರೋ||೧||
ಆರು ಮೂರು ಏಳು ನಾಲ್ಕು
ಎಂಟು ಗ್ರಂಥ ಸಾರಾರ್ಥ
ತೋರಿದೆ ಸರ್ವರಿಗೆ ನ್ಯಾಯದಿಂದ ರಾಯ ಬಾರೋ
ತೋರಿದೆ ಸರ್ವರಿಗೆ ನ್ಯಾಯದಿಂದ ಸರ್ವಜ್ಞ
ಸೂರಿಗಳರಸನೆ ರಾಘವೇಂದ್ರ ರಾಯ ಬಾರೋ||೨||
ರಾಮಪಾದಾಬ್ಬಸುರಸ ಶೃಂಗ ಕೃಪಾಪಾಂಗ
ಭ್ರಾಮಕಜನರ ಮತಭಂಗ ರಾಯ ಬಾರೋ
ಭ್ರಾಮಕಜನರ ಮತಭಂಗ ಮಾಡಿದ
ಧೀಮಂತರೊಡೆಯನೆ ರಾಘವೇಂದ್ರ ರಾಯ ಬಾರೋ||೩||
ಭಾಸುರಚರಿತನೆ ಭೂಸುರವಂದ್ಯನೆ
ಶ್ರೀಸುಧೀಂದ್ರಾರ್ಯರ ವರಪುತ್ರ ರಾಯ ಬಾರೋ
ಶ್ರೀಸುಧೀಂದ್ರಾರ್ಯರ ವರಪುತ್ರನೆನಿಸಿದ
ದೇಶಿಕರೊಡನೆ ರಾಘವೇಂದ್ರ ರಾಯ ಬಾರೋ||೪||
ಭೂತಳನಾಥನ ಭೀತಿಯ ಬಿಡಿಸಿದ್ಯೋ
ಪ್ರೇತತ್ವ ಕಳೆದಿ ಮಹಿಷಿಯ ರಾಯಬಾರೋ
ಪ್ರೇತತ್ವ ಕಳೆದ್ರೋ ಮಹಿಷಿಯ ಮಹಾಮಹಿಮ
ಜಗನ್ನಾಥ ವಿಠ್ಠಲನ ಪ್ರೀತಿಪಾತ್ರ ರಾಯ ಬಾರೋ||೫||
0 ಕಾಮೆಂಟ್‌ಗಳು