|| ಶ್ರೀ ಕೃಷ್ಣ ಸ್ತುತಿ ||
ಬಂದನೋ ಗೋವಿಂದ ಚಂದದಿ ಆನಂದ
ಸುಂದರಿಯ ಮಂದಿರಕ್ಕೆ
ನಂದನಕಂದಾ ನಂದನಕಂದಾ ||ಪ||
ಸುಂದರಕಾರ ನಂದ ಕಂಡ ಗಂಭೀರಾ
ಇಂದು ವದನೆಯರ ಮುಖಗಳಿಂದ ನೋಡಿದ
ತಂದ ಕುಸುಮ ಕರದಿಂದ ಮೂಡಿಸಿದ
ಬಂದನೋ ಗೋವಿಂದನೋ ಅರವಿಂದ ನಯನ ||೧||
ಕಾನನಾದಲ್ಲಿ ಬಲು ದೀನನಾಗಲಿ
ವೇಣುನಾದವೋ ತಾಕೂಡಿ
ಮೊದಲು ಜಾಣನಿವನು ಸುಮ ಬಾಣ ಪಿತನು
ಮಾನಿನಿ ಮನಗಳೊಳಿಯುವ ಗಣ ಮಾಡುತ್ತಲಿ||೨||
ಓಡಿ ಬಂದರೋ ಬಲು ಬೇಡಿಕೊಂಡರೋ
ಗಾರುಡಿಕಾರನು ಅವರ ನೋಡಿ ಮೆರೆದರೋ
ಮಾಡಿದ ಜಾಲ ವಾಸುದೇವ ವಿಠಲ
ಮಾಡಿದ ಮನ ಮಾಡಿದ ತಾ ಕೂಡಿದ ನಾಗ ||೩||
0 ಕಾಮೆಂಟ್‌ಗಳು