|| ರಾಘವೇಂದ್ರ ಸ್ತುತಿ ||
ಪೂಜ್ಯಾಯ ರಾಘವೇಂದ್ರಯ
ಸತ್ಯ ಧರ್ಮರತಾಯಚ
ಭಜತಾಂ ಕಲ್ಪವೃಕ್ಷಾಯ
ನಮತಾಂ ಕಾಮಧೇನವೇ ||
ಗುರುವಾರ ಬಂತಮ್ಮ ಗುರುರಾಯರ ನೆನೆಯಮ್ಮ
ಗುರುವಾರ ಬಂತಮ್ಮ ಗುರುರಾಯರ ನೆನೆಯಮ್ಮ
ಸ್ಮರಣೆ ಮಾತ್ರದಲಿ ಕ್ಷೇಶ ಕಳೆದು
ಸದ್ಗತಿಯ ಕೊಡುವನಮ್ಮ
ವಾರ ಬಂತಮ್ಮ ಗುರುವಾರ ಬಂತಮ್ಮ
ರಾಯರ ನೆನೆಯಮ್ಮ ಗುರುರಾಯರ ನೆನೆಯಮ್ಮ
ಯೋಗಿ ಬರುವನಮ್ಮ ಶುಭ ಯೋಗ ಬರುವುದಮ್ಮ
ರಾಘವೇಂದ್ರ ಗುರುರಾಯ ಬಂದು
ಭವ ರೋಗ ಕಳೆವನಮ್ಮ ||ವಾರ ಬಂತಮ್ಮ ||
ಮನವ ತೊಳೆಯಿರಮ್ಮ ಭಕ್ತಿಯ ಮಣೆಯ ಹಾಕಿರಮ್ಮ
ಧ್ಯಾನದಿಂದ ಕರೆದಾಗ ಬಂದು
ಒಳಗಣ ಬೆರೆವನಮ್ಮ || ವಾರ ಬಂತಮ್ಮ ||
ಕೋಪ ಅರಿಯನಮ್ಮ ಯಾರನುದೂರ ತಳ್ಳನಮ್ಮ
ಪ್ರೀತಿ ಮಾತಿಗೆ ಸೋತು ಬರುವ
ಮಗುವಂಥೆ ಕಾಣಿರಮ್ಮ ||ವಾರ ಬಂತಮ್ಮ ||
ಹಿಂದೆ ಬರುವನಮ್ಮ ರಾಯರ ನೆರಳಿನಂತೆ ಹನುಮ
ಹನುಮನಿದ್ದೆಡೆ ರಾಮನಿದ್ದು
ನಿಜ ಮುಕ್ತಿ ಕೊಡುವನಮ್ಮ || ವಾರ ಬಂತಮ್ಮ ||
0 ಕಾಮೆಂಟ್‌ಗಳು