ಬಾರೋ ರಾಘವೇಂದ್ರ ಬಾರೋ - Baro Raghavendra Baro

|| ರಾಘವೇಂದ್ರ ಸ್ತುತಿ ||

ರಾಗ : ಅಠಾಣ 
ತಾಳ : ಝಂಪೆ




ಬಾರೋ ರಾಘವೇಂದ್ರ ಬಾರೋ

ಕಾರುಣ್ಯವಾರಿಧಿ ಬಾರೋ

ಆರಾಧಿಪ ಭಕ್ತರಭೀಷ್ಟವ

ಪೂರೈಸುವ ಪ್ರಭುವೆ ಬಾರೋ ||ಪ||


ರಾಜವಂಶೋದ್ಭವನ ಪಾದ

ರಾಜೀವ ಭ್ರಂಗನೆ ಬಾರೋ

ರಾಜಾಧಿ ರಾಜರೊಳು

ವಿರಾಜಿಸುವ ಚೆಲುವ ಬಾರೋ ||೧||


ವ್ಯಾಸರಾಯನೆನಿಸಿ ನೃಪನ

ಕ್ಷೇಶಕಳೆದವನೆ ಬಾರೋ

ಶ್ರೀಸುಧೀಂದ್ರರ ಕರಸಂಜಾತ

ವಾಸುದೇವಾರ್ಚಕನೆ ಬಾರೋ ||೨||


ಸನ್ಯಾಸ ಕುಲದೀಪ ಬಾರೋ

ಸನ್ನುತ ಮಹಿಮನೆ ಬಾರೋ 

ಮಾನ್ಯ ಜಗನ್ನಾಥ ವಿಠ್ಠಲಾ

 ಪ್ರಪನ್ನ ಜನರ ಪ್ರಿಯನೆ ಬಾರೋ ||೩||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು