|| ರಾಘವೇಂದ್ರ ಸ್ತುತಿ ||
ರಾಗ : ಕಮಾಚ್
ತಾಳ : ಅಟ್ಟ
ಬಾರೋ ನಮ್ಮ ಮನೆಗೆ ಶ್ರೀರಾಘವೇಂದ್ರ||ಪ||
ಬಾರೋ ದುಃಖಾಪಹಾರ-ಬಾರೋ ದುರಿತದೂರ
ಬಾರಯ್ಯ ಸನ್ಮಾರ್ಗ ದಾರಿ ತೋರುವ ಗುರು||ಅ.ಪ.||
ಬಾಲ ಪ್ರಹ್ಲಾದನಾಗಿ-ಖೂಳ ಕಶ್ಯಪುವಿಗೆ
ಲೋಲನರಹರಿಕಾಲರೂಪವ ತೋರ್ದೆ ||೧||
ವ್ಯಾಸ ನಿರ್ಮಿತಗ್ರಂಥ-ಮಧ್ವಕೃತ ಭಾಷ್ಯವ
ಬೇಸರದೆ ಓದಿ ಮೆರೆವ ವ್ಯಾಸಮುನಿಯೆ ||೨||
ಮಂತ್ರ ಗೃಹದಲಿ ನಿಂತ ಸುಯತಿ ವರ್ಯ
ಅಂತ ತಿಳಿಯದೊ ನೀ ಅಂತರದೊಳು||೩||
ಭೂತಪ್ರೇತಗಳನು - ಘಾತಿಸಿ ಬಿಡುವಂಥ
ಖ್ಯಾತಿಯುತ ಯತಿನಾಥನೆ ತುತಿಸುವೆ ||೪||
ಕುಷ್ಟರೋಗಾದಿಗಳ - ನಷ್ಟ ಮಾಡುವಂಥ
ಅಷ್ಟ ಮಹಿಮೆಯುತ ಶ್ರೇಷ್ಠ ಮುನಿಯೆ||೫||
ಕರೆದರೆ ಬರುವಿಯೆಂಬೋ ಕೀರುತಿ ಕೇಳಿ ನಾ
ಕರೆದೆನೋ ಕರುಣದಿ ಕರವ ಪಿಡಿಯೋ||೬||
ಭಕ್ತವತ್ಸಲನೆಂಬ - ಬಿರುದು ನಿಂದಾದರೆ
ಭಕ್ತನ ಮೊರೆ ಕೇಳಿ-ಮಧೇಶವಿಠಲದಾಸ ||೭||
0 ಕಾಮೆಂಟ್‌ಗಳು