ವೃಂದಾವನ ನೋಡಿರೋ ಗುರುಗಳ - Brindavana Nodairo Gurugala

|| ರಾಘವೇಂದ್ರ ಸ್ತುತಿ||



ವೃಂದಾವನ ನೋಡಿರೋ ಗುರುಗಳ 

ವೃಂದಾವನ ಪಾಡಿರೋ

ವೃಂದಾವನ ನೋಡಿ ಆನಂದಮದವೇರಿ

ಚಂದದಿ ದ್ವಾದಶ ಪುಂಡ್ರಾಂಕಿತಗೊಂಬ||ಪ||


ತುಂಗಾಭದ್ರಾನದಿಯ ತೀರದಿ ಇದ್ದು

ತುಂಗ ಮಂಟಪದ ಮಧ್ಯದಲ್ಲಿದ್ದು

ಶೃಂಗಾರ ತುಳಸಿ ಪದ್ಮಾಕ್ಷ ಸರಗಳಿಂದ

ಮಂಗಳಕರ ಮಹಾಮಹಿಮೆಯಿಂದೊಪ್ಪುವ||೧||


ದೇಶದೇಶದಿ ಮೆಚ್ಚುತ ಇಲ್ಲಿಗೆ ಬಂದು

ವಾಸವಾಗಿ ಸೇವಿಪ

ಭಾಷೆ ಕೊಟ್ಟಂದದಿ ಬಹುವಿಧವರಗಳ

ಸೂಸುವ ಕರಮಹಾಮಹಿಮೆಯಿಂದೊಪ್ಪುವ||೨||


ನಿತ್ಯ ಸನ್ನಿಧಿಸೇವಿಪ - ಭಕ್ತರಿಗೆಲ್ಲ

ಮತ್ತು ಅಭೀಷ್ಟವ ಕೊಡುತ

ಸತ್ಯಾಧಿಗುಣಸಿಂಧು ವೆಂಕಟವಿಠಲನ

ನಿತ್ಯಸನ್ನಿಧಿಯಿಂದ ನಿರುತ ಪೂಜೆಯಗೊಂಬ||೩||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು