|| ಗಣಪತಿ ಸ್ತುತಿ ||
ರಚನೆ: ಹರಪನಹಳ್ಳಿ ಭೀಮವ್ವ [1823-1903]
ರಾಗ: ಮಧ್ಯಮಾವತಿ
ತಾಳ: ಮಿಶ್ರಛಾಪು
ಗಜಮುಖ ಗಣಪಗೆ ನಮೋ ನಮೋ
ತ್ರಿಜಗದೊಳು ಪೂಜಿತ ನಮೋ ನಮೋ||ಪ||
ಸಿದ್ಧಿವಿನಾಯಕ ನಮೋ ನಮೋ
ವಿದ್ಯಾಪ್ರದಾಯಕ ನಮೋ ನಮೋ
ಲಡ್ಡಿಗೆ ಮೋದಕ ನಮೋ ನಮೋ
ನೈವೇದ್ಯಕರ್ಪಿಸುವೆ ನಮೋ ನಮೋ||೧||
ಹರನ ಕುಮಾರಗೆ ನಮೋ ನಮೋ
ಗಿರಿಜೆಗೆ ವರಪುತ್ರ ನಮೋ ನಮೋ
ಹರಿಕಥೆಗಳ ಪೇಳ್ವ ನಮೋ ನಮೋ
ವರಮತಿ ಪಾಲಿಸು ನಮೋ ನಮೋ||೨||
ಆಕಾಶಾಭಿಮಾನಿ ನಮೋ ನಮೋ
ಮೂಷಿಕವಾಹನ ನಮೋ ನಮೋ
ಭೀಮೇಶಕೃಷ್ಣನ ಕಥೆ ನಮೋ ನಮೋ
ಸಂತೋಷದಿಂದಲಿ ಪೇ ನಮೋ ನಮೋ||೩||
0 ಕಾಮೆಂಟ್‌ಗಳು