|| ರಾಘವೇಂದ್ರ ಸ್ತುತಿ ||
ಬಾರೋ ಗುರು ರಾಘವೇಂದ್ರ
ಬಾರಯ್ಯಾ ಬಾ ಬಾ
ಹಿಂದುಮುಂದಿಲ್ಲ ನಗೆ ನೀ ಗತಿ ಏಂದು
ನಂಬಿದೆ ನಿನ್ನ ಪಾದವ ಬಂಧನವ ಬಿಡಿಸೆನ
ಕರಪಿಡಿ ನಂದಕಂದ ಮುಕುಂದ ಬಂಧೋ |ಅಪ।
ಸೇವಕನೇಲೋ ನಾನು ಧಾವಿಸಿ ಬಂದೆನೋ
ಸೇವೆಯ ನೀಡೋ ನೀನು
ಸೇವಕನ ಸೇವೆಯನು ಸೇವಿಸಿ
ಸೇವ್ಯ ಸೇವಕ ಭಾವವಿಯುತ
ಠಾವು ಗಾಣಿಸಿ ಪೊರೆಯೆ ಧರೆಯೊಳು
ಪಾವನತ್ಮಕ ಕಾಯವ ಕರುಣಿ ||೧||
ಕರೆದರೇ ಬರುವಿಯೆಂದು ಸಾರುವುದು ಡಂಗುರ
ತ್ವರಿತದಿ ಒದಗೋ ಬಂದು
ಜರಿಯಬೇಡವೊ ಬರಿದೆ ನಿಮ್ಮಯ
ವಿರಹ ತಾಳದೆ ಮನದಿ ಕೊರಗುವೆ
ಹರಿಯ ಸ್ಮರಣೆಯ ನಿರುತದಲಿ ಏನ
ಹರುಶದಲಿ ನೀ ನಿರುತ ಕೊಡುತಲಿ |೨|
ನರಹರಿ ಪ್ರಿಯನೆ ಬಾ ಗುರುಶೇಶವಿಠಲನ
ಕರುಣ ಪಾತ್ರನೆ ಬೇಗ ಬಾ
ಗುರುವರನೆ ಪರಿಪೋಶಿಸೆನನು
ಮರೆಯದಲೆ ತವಚರಣ ಕೋಟೆಯ
ಲಿರಿಸಿ ಚರಣಾಂಬುಜವ ತೋರುತ
ತ್ವರಿತದಲಿ ಓಡೋಡಿ ಬಾ ಬಾ ||೩||
0 ಕಾಮೆಂಟ್‌ಗಳು