ಗಣಪತಿ ಸ್ತುತಿ - ಗಜವದನ ಪಾಲಿಸೋ, Gajavadana Paliso

|| ಗಣಪತಿ ಸ್ತುತಿ ||

ರಚನೆ: ಶ್ರೀ ವಿಜಯದಾಸರು [1682-1755]


ತಾಳ: ಆದಿತಾಳ

ರಾಗ: ಭೈರವಿ





ಗಜವದನ ಪಾಲಿಸೋ||ಪ||

ತ್ರಿಜಗದೊಡೆಯ ಶ್ರೀ ಭುಜಗಭೂಷಣ |ಅ.ಪ||



ಭಕ್ತಿಯೊಳ್ ಭಜಿಪೆನು ರಕ್ತಾಂಬರಧರ

ಮುಕ್ತಿ ಪಥವ ತೋರೋ ಭಕ್ತಿಸ್ವರೂಪನೆ||೧||


ಏಸುದಿನಕೆ ನಿನ್ನ ವಾಸಿಯ ಪೊಗಳುವೆ

ಲೇಸುಪಾಲಿಸೋ ನಿತ್ಯ ವಾಸವನುತ||೨||


ಪೊಡವಿಯೊಳಗೆ ನಿನ್ನ ಬಿಡುವರ್ಯಾರೋ ರನ್ನ

ಕಡುಹರುಷದಿ ಕಾಯೋ ವಿಜಯವಿಠಲ ದಾಸ||೩||





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು