|| ರಾಮ ಸ್ತುತಿ ||
ಭಜನೆಗೆ ಪ್ರಾರಂಭ ಮಾಡೋಣ
ಆಗಲಿ ಮೊದಲು ರಾಮಸ್ಮರಣಾ,
ಆಗಲಿ ಮೊದಲು ರಾಮಸ್ಮರಣಾ || 1 ||
ರಾಮಭಜನೆಗೆ ನಿಂತಾಗ ||
ಮಾಡಬೇಕು ಲಜ್ಜಾತ್ಯಾಗ
ಮಾಡಬೇಕು ಲಜ್ಞಾತ್ಯಾಗ | 2 ||
ತಾಳಸ್ವರವು ಹೇಗೇ ಇರಲಿ
ರಾಮನಾಮವು ಬಾಯಿಗೆ ಬರಲೀ,
ರಾಮನಾಮವು ಬಾಯಿಗೆ ಬರಲೀ || 3 ||
ಲಕ್ಷಾಬೇಡ ರಾಗದ ಕಡೆಗೆ
ಪ್ರೇಮ ತುಂಬಲಿ ಹೃದಯದೊಳಗೆ,
ಪ್ರೇಮ ತುಂಬಲಿ ಹೃದಯದೊಳಗೆ || 4 ||
ರಾಮನಾಮದ ರುಚಿಯು ಬಹಳಾ
ಮಹಾಭಾಗವತ ಮರುಳ,
ಮಹಾಭಾಗವತ ಮರುಳ || 5 ||
0 ಕಾಮೆಂಟ್‌ಗಳು