|| ಶ್ರೀ ಕೃಷ್ಣ ಭಜನೆ ||
ಹಾದಿ ಮೆರೆದು ಬಂದನಲ್ಲೇ ಮನ್ನಾರು ಕೃಷ್ಣ
ಬೀದಿ ಮೆರೆದು ಬಂದನಲ್ಲೇ
ನಂದ ಗೋಕುಲದಿ ಹುಟ್ಟಿ
ಬೃಂದಾವನದೊಳಾಡಿ
ಇಂದಿರೇ ರಮಣ ಬಂದ ಮನ್ನಾರು ಕೃಷ್ಣ ||೧||
ನೀಲದೊಡವೆಗೆಜ್ಜೆ ಇಟ್ಟು ಕಾಲದಂಗೆ ಕಡಗವಿಟ್ಟು
ನೀಲವರ್ಣ ಬಂದನಲ್ಲೇ ಮನ್ನಾರು ಕೃಷ್ಣ ||೨||
ವಾರೆ ತುರುಬು ಜಾರುಮಲ್ಕು ಅರಳೆಲೆಗೊಂಡನಿಟ್ಟು
ನಿತ್ಯೋತ್ಸವ ಬಂದನಲ್ಲೇ ಮನ್ನಾರು ಕೃಷ್ಣ ||೩||
ಕಡಗೋಲು ವೇಣು ಪಿಡಿದು ಕಡೆಹದ ಮರವೇರ್ದ
ಉಡುಪಿ ಕೃಷ್ಣ ಬಂದನಲ್ಲೇ ಮನ್ನಾರು ಕೃಷ್ಣ ||೪||
ಮಾರನ ಪಿತಾ ತಾನು ದ್ವಾರಕಾ ವಾಸನೆಂದು
ಬಾರೋಎಂದು ಕರೆಯಲು ಪುರಂದರವಿಠಲ ||೫||
0 ಕಾಮೆಂಟ್‌ಗಳು