ರಾಗ : ಹಂಸಾನಂದಿ :
kannadabhajanlyrics.blogspot.com, belaguru Swamiji images |
ಬೆಳಗಿನ ಜಾವ ನನಗೆ ಒಂದು ಕನಸು ಕಂಡಿತ್ತು |
ಆ ಕನಸಲಿ ಹನುಮನ ರೂಪ ಬಂದು ನಿಂತಿತ್ತು||ಪ||
ಸ್ವರ್ಣ ಶೈಲದಂತೆ ಅವನ ದೇಹವು ಹೊಳೆದಿತ್ತು |
ರೋಮ ರೋಮವೆಲ್ಲ ರಾಮನಾಮದಿ
ಮುಳುಗಿ ಹೋಗಿತ್ತು||
ವಜ್ರ ಮಕುಟ ತಾನು ಶಿರದಲ್ಲಿ ಬೆಳಗುತ್ತಾ ಇತ್ತು
ಪೀತಾಂಬರದ ವೀರ ಗಚ್ಚೆಯು
ನಡುವನು ಬಳಸಿತ್ತು|| ||೧||
ಬಲಗೈಯಲ್ಲಿ ತುಳಸಿ ಮಣಿಯ ಜಪವದು ಸಾಗಿತ್ತು|
ಎಡಗೈಯಲ್ಲಿ ವೀರ ಗದೆಯು ಗಿರ ಗಿರ ತಿರುಗಿತ್ತು||
ಬೆರಳಲಿ ಧರ್ಮದ ಉಂಗುರ ತಾನು
ಫಳ ಫಳ ಹೊಳೆದಿತ್ತು |
ಕೊರಳಲಿ ದಿವ್ಯ ಪಾರಿಜಾತದ
ಮಾಲೆಯು ಸಾಗಿತ್ತು||೨||
ಎದೆಯಲಿ ರಾಮನ ಮೂರ್ತಿಯು
ತಾನು ನಗುತಲಿ ನಿಂತಿತ್ತು |
ಮುದದಲಿ ಭಕ್ತರು ಕಾಯುವ
ಪಾದುಕೆ ಕಣ್ಣಲಿ ಮೂಡಿತ್ತು |
ಕಣ್ಣುಗಳಲ್ಲಿ ಶಾಂತಿಯ ಬೆಳ್ಳನೆ ಬೆಳಕನ್ನು ನೀಡಿತ್ತು |
ಹಣೆಯಲ್ಲಿ ಮಂಗಳ ತಿಲಕವು ತಾನು
ಮಿರ ಮಿರ ಮಿರುಗಿತ್ತು ||೩||
ತುಟಿಗಳ ನಡುವೆ ರಾಮನ
ತಾರಕ ಮಂತ್ರವು ಮೊಳಗಿತ್ತು|
ಉದರವು ತಾನು ಭಕ್ತರು ಕೊಟ್ಟ
ಫಲದಿಂದ ತುಂಬಿತ್ತು |
ತಾಳ್ಯದ ಹನುಮನ ಸುಂದರ ರೂಪ ಈ ಪರಿ ಕಂಡಿತ್ತು
ಬಾಳಲಿ ನನಗೆ ಇಂಥಹ ಭಾಗ್ಯವು
ಒಲಿದು ಬಂದಿತ್ತು। ॥೪॥
0 ಕಾಮೆಂಟ್‌ಗಳು