ಹನುಮನ ಮನೆಯವರು ನಾವೆಲ್ಲರು - Hanumana Maneyavaru Navellaru

|| ಹನುಮ ಸ್ತುತಿ 


kannadabhajanlyrics.blogspot.com
kannadabhajanlyrics.blogspot.com, belaguru Swamiji images 



ಹನುಮನ ಮನೆಯವರು ನಾವೆಲ್ಲರು

ಹನುಮನ ಮನೆಯವರು ||ಪ||

ಅನುಮಾನಪಡದೆಲೆ ಸ್ಥಳವ ಕೊಡಿರಿ ಎಮಗೆ||ಅ.ಪ||


ಊರ್ಧ್ವ  ಪುಂಡ್ರವ ನೋಡಿ ಶ್ರದ್ಧೆ ಭಕುತಿ ನೋಡಿ

ಹೃದ್ಗತವಾದೆಮ್ಮ ತತ್ವಗಳನೆ ನೋಡಿ

ಇದ್ದುದನಿಲ್ಲೆಂಬ ಅಬದ್ಧ ನುಡಿವರಲ್ಲಾ

ಮಧ್ವಮುನಿಯು ನಮ್ಮ ತಿದ್ದಿರುವುದ ನೋಡಿ||೧||


ಸತ್ಯ ಮಿಥ್ಯಗಳಿಗೆ ಅಂತರ ಬಲ್ಲೆವು

ಉತ್ತಮ ನೀಚರೆಂಬುವ ಭೇದ ಬಲ್ಲೆವು

ಸುತ್ತಲು ಕಂಡು ಕಾಣದೆ ಇಹ ಎಲ್ಲಕ್ಕೂ

ಉತ್ತಮನೊಬ್ಬನೇ ಹರಿಯೆಂದು ಬಲ್ಲೆವು||೨||


ಹಲವು ಲೋಕಗಳುಂಟೆಂಬುದ ಬಲ್ಲೆವು

ಹಲವು ಯೋನಿಗಳಲ್ಲಿ ಜನ್ಮಗಳೆಲ್ಲವು

ಅಲವಭೋಧರು ನಮ್ಮ ಕಳುಹಿದರಿಲ್ಲಿಗೆ

ತಿಳಿಸಿ ಪ್ರಸನ್ನ ಶ್ರೀ ಹರಿಗೆ ವಿಚಾರವ ||೩||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು