|| ಗಣಪತಿ ಸ್ತುತಿ ||
ಒಂದು ಬಾರಿ ಶಿರದ ಮೇಲೆ ಇರಿಸು ತಾಯೆ ಚರಣ
ದಯೆಯ ತೋರಿ ಮುದವ ನೀಡು ಮೂಲಾಧಾರಿ
ಲಂಬೋದರ ಗಜಾನನ ಅಂಬಾಪುತ್ರ ಶುಭಾನನ||ಪ||
ಎಂಥಾ ಪುಣ್ಯ ನಿನ್ನದಯ್ಯ ಶಿವ ಶಕ್ತಿ ತನಯನೆ
ತಾಯಪಾದ ಹೊತ್ತು ಶಿರದಿ ಭೂಮಿಗಿಳಿದ ಧೀರನೆ
ಲಂಬೋದರ ಗಜಾನನ ಅಂಬಾ ಪುತ್ರ ಶುಭಾನನ||೧||
ಮಾತಾಪಿತರ ಮೂರು ಬಾರಿ ಸುತ್ತಿ ಬಂದ ಗಣಪನೆ
ಮುಗಿಸಿಬಿಟ್ಟೆ ಕ್ಷಣದಲ್ಲಿ ಅಖಂಡಯಾತ್ರೆ ಪ್ರದಕ್ಷಿಣೆ
ಲಂಬೋದರ ಗಜಾನನ ಅಂಬಾಪುತ್ರ ಶುಭಾನನII೨II
0 ಕಾಮೆಂಟ್‌ಗಳು