ಆರಂಭದಲಿ ನಮಿಪೆ - ಬಾಗಿ ಶಿರವ - Aarambhadali Namipe Bagi Shirava

|| ಗಣಪತಿ ಸ್ತುತಿ ||

ರಾಗ : ಕಾಂಬೋಧಿ    

ತಾಳ : ಝಂಪೆ 






ಆರಂಭದಲಿ ನಮಿಪೆ - ಬಾಗಿ ಶಿರವ ।

ಹೇರಂಬ ನೀನೊಲಿದು - ನೀಡೆಮಗೆ ವರವ ।। ಪ।|




ದ್ವಿರದ ವದನನೆ ನಿರುತ|ದ್ವಿರದ ವಂದ್ಯನ ಮಹಿಮೆ ।

ಹರುಷದಿಂದಲಿ|ಕರ ಜಿಂಹೆಯೆರಡರಿಂದ ।।

ಒರೆದು ಪಾಡುವುದಕ್ಕೆ|ಬರುವ ವಿಘ್ನವ ತರಿದು ।

ಕರುಣದಿಂದಲಿ ಯೆನ್ನ|ಕರ ಪಿಡಿದು ಸಲಹೆಂದು ।।೧।।



ಕುಂಭಿಣಿಜೆ ಪರಿ ರಾಮ।ಜಂಭಾರಿ ಧರ್ಮಜರು । 

ಅಂಬಾರಾಧಿಪ । ರಕುತಾಂಬರನೆ ನಿನ್ನ ।।

ಸಂಭ್ರಮದಿ ಪೂಜಿಸಿದ - ರೆಂಬ ವಾರುತಿ ಕೇಳಿ ।

ಹಂಬಲವ ಸಲಿಸೆಂದು|ನಂಬಿ ನಿನ್ನಡಿಗಳಿಗೆ ।।೨।|



ಸೋಮ ಶಾಪದ ವಿಜಿತ | ಕಾಮ ಕಾಮಿತ ದಾತ ।

ವಾಮದೇವ ತನಯ | ನೇಮದಿಂದ ।।

ಶ್ರೀ ಮನೋಹರನಾದ | ಶ್ಯಾಮಸುಂದರ ಸ್ವಾಮಿ ।

ನಾಮ ನೆನೆಯುವ ಭಾಗ್ಯ|ಪ್ರೇಮದಲಿ ಕೊಡುಯೆಂದು||೩||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು