|| ಹನುಮ ಸ್ತುತಿ ||
kannadabhajanlyrics.blogspot.com, belaguru Swamiji images |
ಪಂಕಜಾಕ್ಷನ ಪಾದ ಕಿಂಕರ ಹನುಮಂತ |
ಪಾಪಗಳ ಕಳೆವ ಜಯವಂತ ಬಲವಂತ||ಪ||
ಪಂಕಜ ಸಖನ ಮಂಡಲಕೆ ಹಾರುತ |
ಪಂಕಜನಾಭನಲಿ ವಿದ್ಯೆ ಎಲ್ಲಾ ಕಲಿತ ||ಅ.ಪ||
ಆಂಜನ ತಪಸಿಗೆ ಒಲಿದು ಬಂದಾತ |
ಕುಂಜರ ವರದ ಶ್ರೀರಾಮನ ಕಂಡಾತ |
ಕಂಜನಾಭನ ಸ್ನೇಹ ಕಪಿಗೆ ಮಾಡಿಸುತ |
ಕಂಜ ಸಖ ತನಯ ಕಪಿಯ ಕೊಲಿಸಿದಾತ ||೧||
ಅಂಗದಾದಿ ಮುಖ್ಯ ಕಪಿಗಳ ಕೂಡುತ |
ಚಂಗನೇ ಅಂಬುಧಿಯ ದಾಟಿದಾತ ||
ಅಂಗನೇ ಜಾನಕಿಗೆ ಉಂಗುರ ಕೊಟ್ಟಾತ |
ಹಿಂಗದೇ ಅಸುರರನೆಲ್ಲ ಭಂಗಿಸಿದಾತ ||೨||
ಮಂದಮತಿ ರಾವಣಗೆ ಬುದ್ದಿಯ ಹೇಳುತ |
ತಂದು ಸಂಜೀವನ ತನ್ನವರ ರಕ್ಷಿಸುತ |
ತಂದೆ ಮಂಗಳಾಂಗ ಹರಿ ವಿಠ್ಠಲನೆನ್ನುತ |
ಬಂದ ಬಂದ ಅಸುರರ ಬಿಡದ ಕೊಂದಾತ ||೩||
1 ಕಾಮೆಂಟ್‌ಗಳು
ರಾಗ ಹಾಕಿ what's app ಮಾಡಿ
ಪ್ರತ್ಯುತ್ತರಅಳಿಸಿ